ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಪಾಸ್ವಾನ್‌ರ ಎಲ್‌ಜೆಪಿ ವಿಸರ್ಜನೆ

By Staff
|
Google Oneindia Kannada News

ಬಿಹಾರದಲ್ಲಿ ಪಾಸ್ವಾನ್‌ರ ಎಲ್‌ಜೆಪಿ ವಿಸರ್ಜನೆ
ರಾಮ್‌ ವಿಲಾಸ್‌ ಪಾಸ್ವಾನ್‌ ಬಿಹಾರದ ಮುಖ್ಯಮಂತ್ರಿಯಾಗುವರೇ?

ನವದೆಹಲಿ : ದಿಢೀರ್‌ ರಾಜಕೀಯ ಬೆಳವಣಿಗೆಯಾಂದರಲ್ಲಿ ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ಯನ್ನು ಪಕ್ಷದ ಅಧ್ಯಕ್ಷ ರಾಮ್‌ ವಿಲಾಸ್‌ ಪಾಸ್ವಾನ್‌ ಗುರುವಾರ ವಿಸರ್ಜಿಸಿದ್ದಾರೆ.

ಈ ತೀರ್ಮಾನವನ್ನು ನವದೆಹಲಿಯಲ್ಲಿ ಲೋಕ ಜನಶಕ್ತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್‌. ಎನ್‌. ಸಿಂಗ್‌ ಪ್ರಕಟಿಸಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರಗಳು ಕುತೂಹಲ ಕೆರಳಿಸಿವೆ.

ಕಳೆದ ಒಂದು ತಿಂಗಳ ಹಿಂದೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಆದರೆ ಪಾಸ್ವಾನ್‌ ಅವರ ಲೋಕ ಜನ ಶಕ್ತಿ ಪಕ್ಷ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಹಾಗೂ ಲಾಲೂ ಪ್ರಸಾದ್‌ರ ಆರ್‌ಜೆಡಿ ಪಕ್ಷಗಳನ್ನು ಪಾಸ್ವಾನ್‌ ಸಮಾನ ದೂರದಲ್ಲಿಟ್ಟಿದ್ದರು. ಹೀಗಾಗಿ ರಾಷ್ಟ್ರಪತಿ ಆಡಳಿತ ಅಸ್ತಿತ್ವಕ್ಕೆ ಬಂದಿತ್ತು.

ಈಗ ಪಾಸ್ವಾನ್‌ ಅವರು ಪಕ್ಷವನ್ನು ವಿಸರ್ಜನೆ ಮಾಡಿರುವುದರಿಂದ ಹೊಸ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಅವರು ಸಂಯುಕ್ತ ಜನತಾದಳವನ್ನು ಸೇರಿ, ಎನ್‌.ಡಿ.ಎ ನೆರವಿನಿಂದ ಮುಖ್ಯಮಂತ್ರಿಯಾಗುವರೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X