ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.1ರಿಂದ ಲೈವ್‌ಬ್ಯಾಂಡ್‌ಗಳಲ್ಲಿ ‘ಮದ್ಯ’ ಪಥ್ಯ

By Staff
|
Google Oneindia Kannada News

ಜು.1ರಿಂದ ಲೈವ್‌ಬ್ಯಾಂಡ್‌ಗಳಲ್ಲಿ ‘ಮದ್ಯ’ ಪಥ್ಯ
ಅಕ್ರಮ ಮದ್ಯಕ್ಕೆ ಗೂಂಡಾ ಕಾಯ್ದೆಯಡಿ ಕಡಿವಾಣ -ಸಿದ್ದರಾಮಯ್ಯ

ಬೆಂಗಳೂರು : ಸರ್ಕಾರವು ಜುಲೈ 1ರಿಂದ ರಾಜ್ಯದಲ್ಲಿರುವ ಎಲ್ಲ ಲೈವ್‌ಬ್ಯಾಂಡುಗಳಲ್ಲಿ ಮದ್ಯ ಮಾರಾಟವನ್ನು ರದ್ದುಗೊಳಿಸುವುದಾಗಿ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಗ್ಯಕರ ಸಮಾಜದ ಮೇಲೆ ಲೈವ್‌ಬ್ಯಾಂಡ್‌ಗಳ ವ್ಯತಿರಿಕ್ತ ಪರಿಣಾಮಗಳನ್ನು ಗಮನಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಯಾವುದೇ ಒತ್ತಡಗಳು ಬಂದರೂ, ಜುಲೈನಿಂದ ಲೈವ್‌ಬ್ಯಾಂಡ್‌ಗಳ ಮದ್ಯ ಮಾರಾಟ ಪರವಾನಿಗೆಯನ್ನು ನವೀಕರಿಸುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನು ಸಮರಕ್ಕೆ ಸರ್ಕಾರ ಸಜ್ಜಾಗಿದೆ. ಅಬಕಾರಿ ಕಾನೂನನ್ನು ಮೀರಿದವರನ್ನು ಗೂಂಡಾ ಕಾಯ್ದೆಯಡಿ ಶಿಕ್ಷಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಮಹಾರಾಷ್ಟ್ರದ ಕಥೆ : ಮುಂಬಯಿ ಹೊರತು ಪಡಿಸಿ, ರಾಜ್ಯದೆಲ್ಲೆಡೆಯಲ್ಲಿರುವ ಡ್ಯಾನ್ಸ್‌ ಬಾರ್‌ಗಳನ್ನು ಮುಚ್ಚಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X