• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡೊನೇಷ್ಯಾದಲ್ಲಿ ಮತ್ತೆ ಭೀಕರ ಭೂಕಂಪ : 2000 ಸಾವು

By Staff
|

ಇಂಡೊನೇಷ್ಯಾದಲ್ಲಿ ಮತ್ತೆ ಭೀಕರ ಭೂಕಂಪ : 2000 ಸಾವು

ಗುನುಂಗ್‌ ಸಿತಾಲಿ, ನಿಯಾಸ್‌ನಲ್ಲಿ ಶೇ.85ರಷ್ಟು ಕಟ್ಟಡಗಳು ನೆಲಸಮ

ಜಾಕಾರ್ತಾ : ಇಂಡೋನೇಷ್ಯದ ಸುಮಾತ್ರಾದಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕಂಪ ಸೋಮವಾರ ರಾತ್ರಿ ಸಂಭವಿಸಿದ್ದು, 2000ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಆದರೆ ಸುನಾಮಿ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ.

ಸುನಾಮಿ ಭೀತಿಯಿಂದ ಸುರಕ್ಷಿತ ಸ್ಥಳಗಳತ್ತ ತೆರಳಿದ್ದ ಜನರು, ಮತ್ತೆ ತಮ್ಮ ನಿವಾಸಗಳಿಗೆ ಮರಳುತ್ತಿದ್ದಾರೆ. ಸೋಮವಾರದ ಭೂಕಂಪನದ ತೀವ್ರತೆ, ರಿಕ್ಟರ್‌ ಮಾಪನದಲ್ಲಿ 8.5ರಷ್ಟು ದಾಖಲಾಗಿದೆ.

ಡಿಸೆಂಬರ್‌ 26ರ ಸುನಾಮಿ ದುರಂತ, ಸುಮಾರು 2,20,000 ಜನರನ್ನು ಬಲಿತೆಗೆದುಕೊಂಡಿತ್ತು. ಕಡಲ ಕಿನಾರೆ ಮತ್ತು ದ್ವೀಪಗಳಲ್ಲಿ ಭಾರೀ ಹಾನಿಯನ್ನು ಉಂಟು ಮಾಡಿತ್ತು. ಈಗ ಧುತ್ತನೆ ಮತ್ತೊಮ್ಮೆ ಸುನಾಮಿ ಬಂದೆರಗುವುದೆಂಬ ಆತಂಕ ದೂರವಾಗಿದೆ.

ಬಿಬಿಸಿಗೆ ಸಂದರ್ಶನ ನೀಡಿರುವ ಇಂಡೋನೇಷ್ಯಾದ ಉಪರಾಷ್ಟ್ರಪತಿ ಯೂಸುಫ್‌ ಕಲ್ಲಾ , ಈಗ ಬಂದ ವರದಿಗಳ ಪ್ರಕಾರ ಸುಮಾರು ಸುಮಾರು 2,000 ಜನ ಸತ್ತಿರಬಹುದು. ನಂತರ ಹಾನಿಯ ಪ್ರಮಾಣ ತಿಳಿಯಲಿದೆ ಎಂದಿದ್ದಾರೆ.

ಗುನುಂಗ್‌ ಸಿತೋಲಿ ನಗರದ ಶೇಕಡಾ 80ರಷ್ಟು ಬಹುಮಹಡಿ ಕಟ್ಟಡಗಳು ನಾಶವಾಗಿವೆ. ನಿಯಾಸ್‌ನಲ್ಲಿ ಶೇಕಡಾ 95ರಷ್ಟು ಕಟ್ಟಡಗಳು ನೆಲಸಮವಾಗಿವೆ.

ಭಾರತದಲ್ಲಿ ಲಘು ಕಂಪನ : ಅಂಡಮಾನ್‌, ನಿಕೋಬರ್‌ ದ್ವೀಪಗಳಲ್ಲಿ ಲಘು ಕಂಪನಗಳಾಗಿವೆ. ಮುಂದಿನ ಯಾವುದೇ ಪರಿಸ್ಥಿತಿ ಎದುರಿಸಲು ವಾಯುಪಡೆ, ನೌಕಾಪಡೆ, ಭೂಸೇನೆಯನ್ನು ಸಜ್ಜುಗೊಳಿಸಲಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more