ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ನಿಲ್ದಾಣಕ್ಕೆ 2ಕೋಟಿ-ಸಿಂಧ್ಯಾ

By Staff
|
Google Oneindia Kannada News

ಮಂಗಳೂರು ವಿಮಾನ ನಿಲ್ದಾಣಕ್ಕೆ 2ಕೋಟಿ-ಸಿಂಧ್ಯಾ
ಬೆಂಗಳೂರು-ಮೈಸೂರು ನಡುವೆ ಜೋಡಿ ರೈಲ್ವೆ ಮಾರ್ಗ ನಿರ್ಮಾಣ

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ನಿರ್ಮಾಣ ಕಾಮಗಾರಿಗೆ ಸರ್ಕಾರ ಎರಡು ಕೋಟಿ ರೂ.ಗಳ್ನು ಬಿಡುಗಡೆ ಮಾಡಿದೆ. ಕಾಮಗಾರಿ ಈ ವರ್ಷವೇ ಮುಗಿಯಲಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಪಿ.ಜಿ.ಆರ್‌ ಸಿಂಧ್ಯಾ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಹತ್ತು ಕೋಟಿ ರೂ.ಗಳ ಈ ಯೋಜನೆಯಲ್ಲಿ ಟರ್ಮಿನಲ್‌ ಕಟ್ಟಡದ ವಿಸ್ತರಣೆಗೆ 16.46 ಎಕರೆ ಭೂಮಿಯ ಅಗತ್ಯವಾಗಿದೆ. ಅದನ್ನು ಸ್ವಾಧೀನ ಪಡಿಸಿಕೊಳ್ಳಲು ಮಂಗಳೂರಿನ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜೋಡಿ ಮಾರ್ಗ : ಬೆಂಗಳೂರು-ಮೈಸೂರು ನಡುವಿನ ಜೋಡಿ ರೈಲ್ವೆ ಮಾರ್ಗದ ನಿರ್ಮಾಣದ ವೆಚ್ಚ 407 ಕೋಟಿ ರೂ.ಗಳಾಗಿದ್ದು, ಬೆಂಗಳೂರಿನಿಂದ ರಾಮನಗರದ ವರೆಗೆ ಜೋಡಿ ಮಾರ್ಗ ನಿರ್ಮಾಣ ಮಾಡಲು ಆಗುವ ವೆಚ್ಚದ ಶೇ.66 ರಷ್ಟನ್ನು ಭರಿಸುವುದಾಗಿ ರಾಜ್ಯಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿದೆ. ಇದುವರೆಗೆ ರಾಜ್ಯಸರ್ಕಾರ 8 ಕೋಟಿ ಬಿಡುಗಡೆ ಮಾಡಿದೆ ಎಂದು ಸಿಂಧ್ಯಾ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X