ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿ ಮಕ್ಕಳ ಬಿಟ್ಟು ನಾಪತ್ತೆಯಾದ ಮಹಾ ತಾಯಿ!

By Staff
|
Google Oneindia Kannada News

ಅವಳಿ ಮಕ್ಕಳ ಬಿಟ್ಟು ನಾಪತ್ತೆಯಾದ ಮಹಾ ತಾಯಿ!
ಆಸ್ಪತ್ರೆ ಸಿಬ್ಬಂದಿಯಿಂದ ಅನಾಥ ಅವಳಿ ಶಿಶುಗಳಿಗೆ ಆರೈಕೆ

ಬೆಂಗಳೂರು : ನಗರದ ವಾಣೀವಿಲಾಸ ಆಸ್ಪತ್ರೆಯಲ್ಲಿ ಮಹಿಳೆಯಾಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿ, ಅವುಗಳನ್ನು ಅಲ್ಲೇ ಅನಾಥವಾಗಿ ಬಿಟ್ಟು ನಾಪತ್ತೆಯಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಶಾಂತಾ ಅರ್ಜುನ ಎಂಬ ಮಹಿಳೆ ಯಾವುದೋ ವಿಳಾಸವೊಂದನ್ನು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬುಧವಾರ ಬೆಳಿಗ್ಗೆ ಸ್ನಾನಮಾಡಿ ಬಿಸಿಲು ಕಾಯಿಸುವ ನೆಪದಲ್ಲಿ ಹೊರಗೆ ಹೋದವಳು ಅಲ್ಲಿಂದ ನಾಪತ್ತೆಯಾಗಿದ್ದಾಳೆ. ಆಕೆ ನೀಡಿದ್ದ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ ಶಾಂತಾ ಎಂಬುವರು ಯಾರೂ ಇಲ್ಲ ಎಂಬ ಉತ್ತರ ದೊರೆತಿದೆ.

ಆಸ್ಪತ್ರೆಯ ಖರ್ಚು ಭರಿಸಲು ಸಾಧ್ಯವಾಗದೇ ಆಕೆ ಮಕ್ಕಳನ್ನು ಬಿಟ್ಟು ಹೋಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮಕ್ಕಳು ಅವಧಿಗೆ ಮುನ್ನ ಜನಿಸಿರುವುದರಿಂದ ಅಷ್ಟು ಆರೋಗ್ಯವಾಗಿಲ್ಲ. ಸದ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿಯೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X