ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾನ್ಸಿಸ್ಟರ್‌ನಲ್ಲಿ ಡಿ.ಟಿ.ಎಚ್‌!

By Staff
|
Google Oneindia Kannada News

ಟ್ರಾನ್ಸಿಸ್ಟರ್‌ನಲ್ಲಿ ಡಿ.ಟಿ.ಎಚ್‌!
ರೇಡಿಯೋಗಳ ಕಾಲ ಮುಗಿದು ಹೋಯಿತು ಅನ್ನುವಾಗಲೇ ಮತ್ತೆ ಶುರುವಾಗಿದೆ. ಕೆಲವು ನೂರು ರೂಪಾಯಿಗಳಿಗೆ ಲಭ್ಯವಿರುವ ಕಾರ್ಡ್‌ಲೆಸ್‌ ಹೆಡ್‌ಫೋನ್‌ಗಳ ಟ್ರಾನ್ಸ್‌ಮಿಟರ್‌ ಬಳಸಿ, ಎಫ್‌.ಎಂ.ಬ್ಯಾಂಡ್‌ನ ಟ್ರಾನ್ಸಿಸ್ಟರ್‌ನಲ್ಲಿ ಎಲ್ಲಾ ಚಾನಲ್‌ಗಳನ್ನು ಆಲಿಸಿ, ಆನಂದಪಡಿ!

DTH in Radio Transistorಇತ್ತೀಚೆಗೆ ಜನಪ್ರಿಯವಾಗುತ್ತಿರುವ ಡಿ.ಟಿ.ಎಚ್‌ (ಡೈರೆಕ್ಟ್‌ ಟು ಹೋಮ್‌) ಮಾಧ್ಯಮದಲ್ಲಿ ಟಿ.ವಿ ಚ್ಯಾನಲ್‌ಗಳೊಡನೆ ಆಡಿಯಾ ಚ್ಯಾನಲ್‌ಗಳೂ ಇರುತ್ತವೆ. ದೂರದರ್ಶನದ ಡಿ.ಟಿ.ಎಚ್‌ನಲ್ಲಂತೂ ವಿವಿಧಭಾರತಿ, ಎಫ್‌.ಎಂ ಗೋಲ್ಡ್‌, ಎಫ್‌.ಎಂ ರೈನ್‌ಬೋ, ಬೆಂಗಳೂರಿನ ಕನ್ನಡ ಕಾರ್ಯಕ್ರಮಗಳು ಸೇರಿದಂತೆ 10ಕ್ಕೂ ಹೆಚ್ಚು ರೇಡಿಯೋ ಚ್ಯಾನಲ್‌ ಗಳು ದಿನದ 24 ತಾಸು ಲಭ್ಯವಿವೆ. ಒಂದೇ ತೊಂದರೆಯೆಂದರೆ ಇವುಗಳನ್ನು ಟಿ.ವಿ. ಸೆಟ್‌ಗಳಲ್ಲೇ ಕೇಳ ಬೇಕು, ಇಲ್ಲವೇ ದುಬಾರಿಯಾದ ಮ್ಯೂಸಿಕ್‌ ಸಿಸ್ಟಂಗಳನ್ನು ಉಪಯೋಗಿಸಬೇಕು.

ಇದಾವುದೂ ಇಲ್ಲದೆ ಕೆಲವು ನೂರು ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರ್ಡ್‌ಲೆಸ್‌ ಹೆಡ್‌ಫೋನ್‌ಗಳ ಟ್ರಾನ್ಸ್‌ಮಿಟರ್‌ ಉಪಯೋಗಿಸಿ ಹೆಡ್‌ಫೋನ್‌ ಜತೆಗೆ ಎಫ್‌.ಎಂ. ಬ್ಯಾಂಡ್‌ ಇರುವ ಟ್ರಾನ್ಸಿಸ್ಟರ್‌ನಲ್ಲೂ ಈ ಚ್ಯಾನಲ್‌ಗಳನ್ನು ಆಲಿಸಲು ಸಾಧ್ಯವಿದೆ! ಸೂಕ್ತ ವೈಯರ್‌ಗಳನ್ನು ಬಳಸಿ ಸೆಟ್‌ಟಾಪ್‌ ಬಾಕ್ಸ್‌ನ ಆಡಿಯೋ ಪೋರ್ಟನ್ನು ಈ ಟ್ರಾನ್ಸ್‌ಮಿಟರ್‌ಗೆ ಜೋಡಿಸಿದರೆ ಸರಿ. ಟ್ರಾನ್ಸಿಸ್ಟರನ್ನು ಟ್ಯೂನ್‌ ಮಾಡಿ ಅಡುಗೆಮನೆಯಲ್ಲೋ, ದಿಂಬಿನ ಪಕ್ಕದಲ್ಲೋ ಅಥವಾ ಸುಮಾರು 25 ಮೀಟರ್‌ಗಳ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಂಡು ಮೆಚ್ಚಿನ ಕಾರ್ಯಕ್ರಮಗಳನ್ನು ಆಲಿಸಬಹುದು.

ಉಪಯೋಗಿಸುವ ಟ್ರಾನ್ಸಿಸ್ಟರ್‌ನ ಎಫ್‌.ಎಂ. ಬ್ಯಾಂಡ್‌ ಕನಿಷ್ಠ 64 ಮೆಗಾಹರ್ಟ್ಜ್‌ನಿಂದ 108 ಮೆಗಾಹರ್ಟ್ಜ್‌ ವ್ಯಾಪ್ತಿಯನ್ನು ಹೊಂದಿರುವುದು ಹಾಗೂ ಟ್ರಾನ್ಸ್‌ಮಿಟರ್‌ನ ಕಂಪನಾಂಕ ಈ ಮಿತಿಯಾಳಗೆ ಇರುವುದು ಅಗತ್ಯ. (ಕಂಪನಾಂಕವನ್ನು ಸೂಚನಾಪತ್ರದಲ್ಲಿ ನಮೂದಿಸಿರುತ್ತಾರೆ). ಅಂತೆಯೇ ಸೆಟ್‌ಟಾಪ್‌ ಬಾಕ್ಸ್‌ನಲ್ಲೂ ಎರಡು ಸೆಟ್‌ ಆಡಿಯಾ ಪೋರ್ಟ್‌ಗಳಿದ್ದರೆ ಒಂದನ್ನು ಟಿ.ವಿ.ಗೂ ಇನ್ನೊಂದನ್ನು ಈ ಉದ್ದೇಶಕ್ಕೂ ಬಳಸಲು ಅನುಕೂಲ.

ಡಿ.ಟಿ.ಹೆಚ್‌ ಬದಲಿಗೆ ಸಿ.ಡಿ.ಪ್ಲೇಯರ್‌ ಅಥವಾ ಟೇಪ್‌ರೆಕಾರ್ಡರನ್ನು ಈ ಉಪಕರಣಕ್ಕೆ ಜೋಡಿಸಿದರೆ ನಮ್ಮದೇ ಸ್ವಂತ ರೇಡಿಯಾ ಸ್ಟೇಷನ್‌ನ ಆನಂದವನ್ನೂ ಹೊಂದಬಹುದು!

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X