ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ವಿ.ವಿ ಕುಲಪತಿಯಾಗಿ ಅನಂತರಾಮಯ್ಯ

By Staff
|
Google Oneindia Kannada News

ತುಮಕೂರು ವಿ.ವಿ ಕುಲಪತಿಯಾಗಿ ಅನಂತರಾಮಯ್ಯ
ದಕ್ಷಿಣ ಭಾರತದ ಅತ್ಯಂತ ಹಿರಿಯ ಇತಿಹಾಸ ಪ್ರಾಧ್ಯಾಪಕರಿಗೆ ಸಂದ ಮನ್ನಣೆ

ಬೆಂಗಳೂರು : ತುಮಕೂರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಓಬಳಯ್ಯ ಅನಂತ ರಾಮಯ್ಯ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಉನ್ನತ ಶಿಕ್ಷಣ ಸಚಿವ ಡಿ.ಮಂಜುನಾಥ್‌ ಈ ಬಗ್ಗೆ ಸಲ್ಲಿಸಿದ್ದ ಶಿಫಾರಸನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸಮ್ಮತಿಸಿದ್ದಾರೆ. ಎಂಟು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ತುಮಕೂರು ವಿ.ವಿಯ ಕುಲಪತಿಗಳಾಗಿ ಮುಂದಿನ ನಾಲ್ಕುವರ್ಷಗಳವರೆಗೆ ಅನಂತರಾಮಯ್ಯ ಕಾರ್ಯನಿರ್ವಹಿಸುವರು.

ಡಾ.ಓಬಳಯ್ಯ ಅನಂತರಾಮಯ್ಯ ಅವರು ದಕ್ಷಿಣ ಭಾರತದಲ್ಲೇ ಅತ್ಯಂತ ಹಿರಿಯ ಇತಿಹಾಸ ಪ್ರಾಧ್ಯಾಪಕರೆಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ 1946ರಲ್ಲಿ ಜನಿಸಿದ ಅವರು, ಬೆಂಗಳೂರು ಮತ್ತು ಮೈಸೂರು ವಿ.ವಿಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತರಾಮಯ್ಯ, ನನ್ನ ಅನುಭವವನ್ನು ಬಳಸಿಕೊಂಡು, ತುಮಕೂರು ವಿವಿಯನ್ನು ಮಾದರಿ ವಿ.ವಿಯನ್ನಾಗಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X