ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಫಲಿತಾಂಶ

By Staff
|
Google Oneindia Kannada News

ಇಂದು ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಫಲಿತಾಂಶ
82,186 ಅಭ್ಯರ್ಥಿಗಳಲ್ಲಿ ಅಂತಿಮ ಪರೀಕ್ಷೆಗೆ 3005 ಮಂದಿಗೆ ಪ್ರವೇಶ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆ.ಪಿ.ಎಸ್‌.ಸಿ) ಕಳೆದ ತಿಂಗಳು ನಡೆಸಿದ 2005ರ ಕೆ.ಎ.ಎಸ್‌ ಪೂರ್ವಭಾವಿ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ.

ಫೆ.27ರಂದು ನಡೆದ ಈ ಪರೀಕ್ಷೆಗೆ 1.3ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಅವರಲ್ಲಿ 82,186 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 148 ಗೆಜೆಟೆಡ್‌ ಪ್ರೊಬೆಷನರ್‌ ಅಧಿಕಾರಿಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ 3005 ಅಭ್ಯರ್ಥಿಗಳು ಆರ್ಹತೆ ಪಡೆದಿದ್ದಾರೆ. ಅಂತಿಮ ಪರೀಕ್ಷೆ ಬೆಂಗಳೂರು ಮತ್ತು ಧಾರವಾಡದಲ್ಲಿ ಜೂನ್‌ ಮೊದಲ ವಾರದಲ್ಲಿ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಆಯೋಗದ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮೈಸೂರು ಪ್ರಾಂತೀಯ ಕೇಂದ್ರಗಳಲ್ಲಿ ಹಾಗೂ ಇಲಾಖೆಯ http://kpsc.kar.nic.in ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

ಮುಖ್ಯ ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳು ಏ.4ರೊಳಗೆ ನಿಗದಿತ ಶುಲ್ಕವನ್ನು ಆಯೋಗದ ವಿಳಾಸಕ್ಕೆ ಡಿಡಿ ಕಳುಹಿಸಿ, ಅರ್ಜಿ ನಮೂನೆ ಮತ್ತಿತರ ಮಾಹಿತಿಯನ್ನು ಪಡೆಯಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X