ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.23:‘ಗುಂಡಪ್ಪನವರ ಸಾಹಿತ್ಯ’ ವಿಚಾರ ಸಂಕಿರಣ

By Staff
|
Google Oneindia Kannada News

ಮಾ.23:‘ಗುಂಡಪ್ಪನವರ ಸಾಹಿತ್ಯ’ ವಿಚಾರ ಸಂಕಿರಣ
ಜನ್ಮಶತಮಾನೋತ್ಸವದ ಬೆನ್ನಲ್ಲಿ ಎಲ್‌.ಗುಂಡಪ್ಪನವರ ಸಾಹಿತ್ಯದ ಅನಾವರಣ

ಬೆಂಗಳೂರು : ನಗರದ ಕನ್ನಡಭವನದಲ್ಲಿನ ನಯನ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಎಲ್‌.ಗುಂಡಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ ಜಂಟಿ ಆಶ್ರಯದಲ್ಲಿ ಏರ್ಪಜಿಸಲಾಗಿರುವ ಈ ಕಾರ್ಯಕ್ರಮವನ್ನು ಹಿರಿಯ ರಾಜಕಾರಣಿ ಹಾರ್ನಹಳ್ಳಿ ರಾಮಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಡಾ.ಟಿ.ವಿ.ವೆಂಕಟಾಚಲಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಾಹಿತಿ ಪ್ರೊ.ಕೆ.ಎಸ್‌.ನಿಸಾರ್‌ಅಹಮದ್‌ ಅಧ್ಯಕ್ಷತೆವಹಿಸುವರು.

L.Gundappaಗೋಷ್ಠಿ-1 : ಬೆಳಿಗ್ಗೆ 11.30ಕ್ಕೆ ಆರಂಭವಾಗಲಿರುವ ಮೊದಲ ಗೋಷ್ಠಿಯಲ್ಲಿ ಗುಂಡಪ್ಪ ಅವರ ಅನುವಾದ ಸಾಹಿತ್ಯವನ್ನು ಕುರಿತು, ಪ್ರೊ.ಜಿ.ವೆಂಕಟಸುಬ್ಬಯ್ಯ, ಶತಾವಧಾನಿ ಡಾ.ಆರ್‌.ಗಣೇಶ್‌, ಡಾ.ಪ್ರಧಾನ ಗುರುದತ್‌, ಡಾ.ತಮಿಳ್‌ ಸೆಲ್ವಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವರು.

ಗೋಷ್ಠಿ-2 : ಎಲ್‌.ಗುಂಡಪ್ಪ ಅವರ ಇತರ ಸಾಹಿತ್ಯ ಪ್ರಕಾರಗಳ ಕುರಿತ ವಿಚಾರ ಸಂಕಿರಣ, ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಡಾ.ಸಾ.ಶಿ.ಮರುಳಯ್ಯ ಗೋಷ್ಠಿಯ ಅಧ್ಯಕ್ಷತೆವಹಿಸುವರು. ಗುಂಡಪ್ಪ ಅವರ ನಿಘಂಟುಗಳು ಸಂಪಾದನೆಗಳು, ಸೃಜನಶೀಲ ಸಾಹಿತ್ಯದ ಬಗ್ಗೆ ಡಾ.ಬಸವರಾಜ ಕಲ್ಗುಡಿ, ಪ್ರೊ.ನಾ.ಗೀತಾಚಾರ್ಯ, ಪ್ರೊ.ಡಿ.ಲಿಂಗಯ್ಯ ಮಾತನಾಡುವರು.

ಸಮಾರೋಪ : ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಹಂ.ಪ.ನಾಗರಾಜಯ್ಯ ವಹಿಸಲಿದ್ದು, ಪ್ರೊ.ಜಿ.ಎಸ್‌. ಸಿದ್ಧಲಿಂಗಯ್ಯ ಸಮರೋಪ ಭಾಷಣ ಮಾಡುವರು.

ಎಲ್‌. ಗುಂಡಪ್ಪ ಸ್ಮಾರಕ ಟ್ರಸ್ಟ್‌ ನ ಎಲ್‌.ಜಿ.ಜ್ಯೋತೀಶ್ವರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಮುದ್ದುಮೋಹನ್‌ ಅವರು ಸಾಹಿತ್ಯಾಸಕ್ತರನ್ನು ಸ್ವಾಗತಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X