ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಯಲದಿ ಹಳೆಯ ಮರಗಳಿಗೆ ಕೊಡಲಿ

By Staff
|
Google Oneindia Kannada News

ಮೈಸೂರು ಮೃಗಾಯಲದಿ ಹಳೆಯ ಮರಗಳಿಗೆ ಕೊಡಲಿ
ಪುಟಾಣಿಗಳ ಸಾವಿನ ಹಿನ್ನೆಲೆಯಲ್ಲಿ ಮೃಗಾಲಯದ ಆಡಳಿತ ಮಂಡಳಿಯಿಂದ ತೀವ್ರ ನಿಗಾ

ಮೈಸೂರು : ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿನ ಹಳೆಯ ಮರಗಳನ್ನು ತೆರವುಗೊಳಿಸುವ ಪ್ರಯತ್ನಗಳು ಈಗ ಆರಂಭಗೊಂಡಿವೆ.

ಮೃಗಾಯಲಕ್ಕೆ ಭೇಟಿ ನೀಡುವ ಜನರ ಸುರಕ್ಷತೆಗಾಗಿ ಈ ಕ್ರಮವನ್ನು ಆಡಳಿತ ಮಂಡಳಿ ಕೈಗೊಂಡಿದೆ. ಇತ್ತೀಚೆಗಷ್ಟೇ ಮೃಗಾಯಲಕ್ಕೆ ಆಗಮಿಸಿದ್ದ ಪ್ಲೇಹೋಮ್‌ ಮಕ್ಕಳ ಮೇಲೆ ಬೃಹತ್‌ ಸಿಲ್ವರ್‌ ಓಕ್‌ ಮರ ಉರುಳಿಬಿದ್ದಿತ್ತು. ಆ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಪುಟಾಣಿಗಳು ಗಾಯಗೊಂಡಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಮೃಗಾಯಲದ ಆಡಳಿತ ಮಂಡಳಿ ತೀವ್ರನಿಗಾವಹಿಸಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ಸೈನ್ಸ್‌ ಮತ್ತು ಟೆಕ್ನಾಲಜಿಯ ಪರಿಣಿತರನ್ನು ಮೃಗಾಯಲಕ್ಕೆ ಆಹ್ವಾನಿಸಿದ್ದು, ರೋಗಗ್ರಸ್ಥ ಮತ್ತು ಆಯಸ್ಸು ಮುಗಿದಿರುವ ಮರಗಳನ್ನು ಗುರ್ತಿಸಲಾಗುತ್ತಿದೆ. ಮುಂದಿನ ಜೂನ್‌-ಜುಲೈ ತಿಂಗಳಲ್ಲಿ ಹೊಸದಾಗಿ ಹೊಂಗೆ, ಬೇವು, ನೇರಳೆ ಸಸಿಗಳನ್ನು ನೆಡಲು ಹಾಗೂ ಓಕ್‌ನಂತಹ ಮರಗಳನ್ನು ಬೆಳೆಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X