ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತ ಟೆಸ್ಟ್‌ : 2ನೇ ಇನ್ನಿಂಗ್ಸ್‌ನಲ್ಲೂ ದ್ರಾವಿಡ್‌ ಶತಕ

By Staff
|
Google Oneindia Kannada News

ಕೋಲ್ಕತ್ತ ಟೆಸ್ಟ್‌ : 2ನೇ ಇನ್ನಿಂಗ್ಸ್‌ನಲ್ಲೂ ದ್ರಾವಿಡ್‌ ಶತಕ
ದಿನೇಶ್‌ ಕಾರ್ತಿಕ್‌ಗೆ ತಪ್ಪಿದ ಶತಕ, ಪಾಕ್‌ಗೆ 422 ರನ್‌ಗಳ ಗುರಿ

ಕೋಲ್ಕತ್ತ : ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ ನಲ್ಲಿ ಶತಕ (110) ಬಾರಿಸಿದ್ದ ರಾಹುಲ್‌ ದ್ರಾವಿಡ್‌, ಎರಡನೇ ಇನ್ನಿಂಗ್ಸ್‌ ನಲ್ಲೂ ಅದೇ ಸಾಧನೆಯ ಮೂಲಕ (135) ಭಾರತದ ಪಾಲಿಗೆ ‘ಆಪದ್ಭಾಂಧವ’ ಎಂದುದನ್ನು ಶನಿವಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಶುಕ್ರವಾರ ಭಾರತ ಪಟಪಟನೆ ಆರಂಭಿಕ ಆಟಗಾರರ ವಿಕೆಟ್‌ ಕಳೆದುಕೊಂಡು ತೀವ್ರ ತೊಂದರೆಗೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಸಚಿನ್‌ ಮತ್ತು ರಾಹುಲ್‌ ಪರಿಸ್ಥಿತಿಯನ್ನು ಸುಧಾರಿಸುತ್ತಿರುವಾಗಲೇ ಅಂಪೈರ್‌ ಬಕ್ನರ್‌ ಕೆಟ್ಟ ನಿರ್ಣಯಕ್ಕೆ ಸಚಿನ್‌ ನಿರ್ಗಮಿಸಬೇಕಾಯ್ತು.

ಆಗ ತಂಡವು ಭಾರತದ ಭದ್ರಗೋಡೆ ಎಂದೇ ಕರೆಯಿಸಿಕೊಳ್ಳುವ ದ್ರಾವಿಡ್‌ ಅವರನ್ನೇ ನೆಚ್ಚಿಕೊಂಡಿತ್ತು. ಆ ನಂಬಿಕೆಯನ್ನು ಶತಕ ಗಳಿಸುವ ಮೂಲಕ ಅವರು ನಿಜಗೊಳಿಸಿದರು. ಅಲ್ಲದೇ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರೊಂದಿಗೆ ಶತಕದ ಜೊತೆಯಾಟವಾಡಿ ಭಾರತವನ್ನು ಅಪಾಯದಿಂದ ಪಾರುಮಾಡಿದರು.

ಒಂದು ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಅಪರೂಪದ ಸಾಧನೆಯನ್ನು ಅವರು ಎರಡನೇ ಸಲ ಮಾಡಿದ್ದಾರೆ. ಈ ಮೊದಲು ಅವರು 1999ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಈ ಸಾಧನೆ ಮಾಡಿದ್ದರು.

ದಿನದ ಆಟ ಇನ್ನೊಂದು ಗಂಟೆಯಿರುವಾಗಲೇ ಭಾರತ 9ವಿಕೆಟ್‌ಗೆ 407ರನ್ನುಗಳನ್ನು ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ದ್ರಾವಿಡ್‌ಗೆ ಅತ್ಯುತ್ತಮ ಬೆಂಬಲ ನೀಡಿದ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಕೇವಲ 7 ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಅವರು ಶತಕ ಗಳಿಸಿದ್ದರೆ ಶತಕ ಗಳಿಸಿದ ಅತ್ಯಂತ ಕಿರಿಯ ವಿಕೆಟ್‌ ಕೀಪರ್‌ ಎನ್ನುವ ಗೌರವಕ್ಕೆ ಅವರು ಪಾತ್ರರಾಗುತ್ತಿದ್ದರು. ಪಾಕಿಸ್ತಾನ ಈ ಟೆಸ್ಟ್‌ನ್ನು ತನ್ನದಾಗಿಸಿಕೊಳ್ಳಲು 422ರನ್‌ ಗಳಿಸಬೇಕಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X