ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ.ಆರ್‌.ಸುದರ್ಶನ್‌ ವಿ.ಪರಿಷತ್ತಿನ 22ನೇ ಸಭಾಪತಿ

By Staff
|
Google Oneindia Kannada News

ವಿ.ಆರ್‌.ಸುದರ್ಶನ್‌ ವಿ.ಪರಿಷತ್ತಿನ 22ನೇ ಸಭಾಪತಿ
ವಿಧಾನಸಭೆಯ ಉಪಸಭಾಪತಿಯಾಗಿ ಎನ್‌.ವೈ.ಗೋಪಾಲಕೃಷ್ಣ ಆಯ್ಕೆ

ಬೆಂಗಳೂರು : ವಿಧಾನಪರಿಷತ್‌ ಸಭಾಧ್ಯಕ್ಷರಾಗಿ ವಿ.ಆರ್‌. ಸುದರ್ಶನ್‌ ಮತ್ತು ವಿಧಾನಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಎನ್‌.ವೈ. ಗೋಪಾಲಕೃಷ್ಣ ಗುರುವಾರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ವಿಧಾನಪರಿಷತ್‌ನ 22ನೇ ಸಭಾಪತಿಯಾಗಿ ಆಯ್ಕೆಗೊಂಡಿರುವ ಸುದರ್ಶನ್‌ ಹೆಸರನ್ನು ಸದನದಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸೂಚಿಸಿದರು. ಬಿಜೆಪಿಯ ಡಿ.ಎಚ್‌.ಶಂಕರಮೂರ್ತಿ ಅನುಮೋದಿಸಿದಾಗ ಸದನ ಸುದರ್ಶನ್‌ ಆಯ್ಕೆಯನ್ನು ಅಂಗೀಕರಿಸಿತು.

ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಎನ್‌.ವೈ. ಗೋಪಾಲಕೃಷ್ಣ ಅವರ ಹೆಸರನ್ನು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಸೂಚಿಸಿದಾಗ, ಎನ್‌.ಎಸ್‌.ಭೋಜರಾಜು ಅಂಗೀಕರಿಸಿದರು.

ನೂತನವಾಗಿ ಆಯ್ಕೆಗೊಂಡ ವಿ.ಆರ್‌.ಸುದರ್ಶನ್‌, ಎನ್‌.ವೈ.ಗೋಪಾಲಕೃಷ್ಣ ಅವರನ್ನು ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌, ಪ್ರತಿಪಕ್ಷದ ನಾಯಕ ಬಿ. ಎಸ್‌. ಯಡಿಯೂರಪ್ಪ , ವಿಧಾನ ಸಭೆ ಸಭಾಧ್ಯಕ್ಷ ಕೃಷ್ಣ ಅಭಿನಂದಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X