ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಎಂ.ಕೃಷ್ಣ ಅವರ ಭಾಷಣಕ್ಕೆ ಮಿಶ್ರ ಪ್ರತಿಕ್ರಿಯೆ

By Staff
|
Google Oneindia Kannada News

ಎಸ್‌.ಎಂ.ಕೃಷ್ಣ ಅವರ ಭಾಷಣಕ್ಕೆ ಮಿಶ್ರ ಪ್ರತಿಕ್ರಿಯೆ
ಮಹಾಜನ್‌ ವರದಿಗೆ ಕರ್ನಾಟಕ ಬದ್ಧ -ಎನ್‌.ಧರ್ಮಸಿಂಗ್‌

ಬೆಂಗಳೂರು : ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಮಾಡಿದ್ದ ಭಾಷಣ, ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ತೀವ್ರ ಚರ್ಚೆಗೆ ಗುರಿಯಾಯಿತು.

ಮಹಾಜನ್‌ ವರದಿಗೆ ಸರಕಾರ ಬದ್ಧವಾಗಿದೆ. ಈ ಸದನದಲ್ಲಿದ್ದಾಗ ಕೃಷ್ಣ ಅವರು ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದರು. ಈಗ ಆ ರಾಜ್ಯದ ರಾಜ್ಯಪಾಲರಾಗಿ ಆ ಮಾತಾಡಿದ್ದಾರೆ. ಇದಕ್ಕೆ ಆಕ್ಷೇಪ ಬೇಡ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ನೀಡಿದ ಉತ್ತರ ಸಭೆಗೆ ತೃಪ್ತಿ ನೀಡಲಿಲ್ಲ.

ಕೃಷ್ಣ ಅವರ ಭಾಷಣಕ್ಕೆ ಎಂ.ಇ.ಎಸ್‌.ಬೆಂಬಲಿತ ಪಕ್ಷೇತರ ಸದಸ್ಯರಾದ ಮನೋಹರ್‌ ಕಿಣೇಕರ್‌, ದಿಗಂಬರ ಪಾಟೀಲ ಸಮರ್ಥನೆ ನೀಡಲು ಪ್ರಯತ್ನಿಸಿದರು.

ಈ ಸಮರ್ಥನೆಗೆ ವಾಟಾಳ್‌ ನಾಗರಾಜ್‌ ಮತ್ತು ಬಿಜೆಪಿ ಸದಸ್ಯರು ಕೆರಳಿದರು. ಮಹಾರಾಷ್ಟ್ರ ರಾಜ್ಯಪಾಲರ ಭಾಷಣದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಬೇಕು ಎನ್ನುವ ಒತ್ತಾಯಕ್ಕೆ ಸದನದಲ್ಲಿ ಸಹಮತ ವ್ಯಕ್ತವಾಗಲಿಲ್ಲ. ಅಂತಿಮವಾಗಿ ವಾಟಾಳ್‌ ನಾಗರಾಜ್‌ ಸಭಾತ್ಯಾಗ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X