ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌, ವಿಪ್ರೊದಲ್ಲಿ ಹುಸಿಬಾಂಬ್‌ ಬೆದರಿಕೆ

By Staff
|
Google Oneindia Kannada News

ಇನ್ಫೋಸಿಸ್‌, ವಿಪ್ರೊದಲ್ಲಿ ಹುಸಿಬಾಂಬ್‌ ಬೆದರಿಕೆ
ನಗರದ ಐಟಿ ಕಂಪನಿಗಳಲ್ಲಿ ಈಗ ಹೆಚ್ಚಿದ ಆತಂಕ, ಬಿಗಿ ಭದ್ರತೆ

ಬೆಂಗಳೂರು : ನಗರದ ಇನ್ಫೋಸಿಸ್‌ ಮತ್ತು ವಿಪ್ರೊ ಕಚೇರಿಯಲ್ಲಿ ಬಾಂಬ್‌ ನೆಟ್ಟಿರುವ ಬಗ್ಗೆ ಬಂದ ಹುಸಿ ದೂರವಾಣಿ ಕರೆಯಿಂದ ಕೆಲವು ಗಂಟೆಗಳ ಕಾಲ ಮಂಗಳವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೋರಮಂಗಲ- ಸರ್ಜಾಪುರ ರಸ್ತೆಯ ವಿಪ್ರೊ ಕಚೇರಿ ಹಾಗೂ ನಗರದ ಹೊರವಲಯದ ಇನ್ಫೋಸಿಸ್‌ ಕಚೇರಿಯಲ್ಲಿ ಬಾಂಬ್‌ ನೆಟ್ಟಿರುವ ಬಗ್ಗೆ ದೂರವಾಣಿ ಕರೆ ಮೂಲಕ ಬೆದರಿಕೆವೊಡ್ಡಲಾಗಿತ್ತು.

ಪೋಲೀಸರು, ಬಾಂಬ್‌ ನಿಷ್ಕಿೃಯ ದಳ ಮತ್ತು ಶ್ವಾನದಳ ವ್ಯಾಪಕ ಶೋಧ ನಡೆಸಿದರು. ಅಂತಿಮವಾಗಿ ಇದೊಂದು ಹುಸಿ ಬಾಂಬ್‌ ಬೆದರಿಕೆ ಎನ್ನುವ ಅಂಶ ಸಾಬೀತಾಗಿದೆ.

ಕಳೆದ ವಾರ ವಿಪ್ರೊ ಕಚೇರಿಯಲ್ಲಿ ಇಂತಹದೇ ಘಟನೆ ವರದಿಯಾಗಿತ್ತು. ಹುಸಿ ಕರೆ ಮಾಡಿದ್ದ ಕಂಪನಿಯ ಉದ್ಯೋಗಿಯನ್ನು ಪೋಲೀಸರು ಬಂಧಿಸಿದ್ದರು.

ಲಷ್ಕರ್‌-ಇ-ತೊಯಿಬಾ ಉಗ್ರರು ಬೆಂಗಳೂರಿನ ಐಟಿ ಕಂಪನಿಗಳ ಮೇಲೆ ದಾಳಿ ನಡೆಸುವ ಹುನ್ನಾರ, ದೆಹಲಿ ಪೋಲೀಸರಿಂದ ಪತ್ತೆಯಾದ ಬೆನ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಐಟಿ ಕಂಪನಿಗಳು ಭದ್ರತೆಗೆ ಹೆಚ್ಚು ಒತ್ತು ನೀಡಿವೆ.
(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X