ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪ ಸಂಖ್ಯಾತರೆಂಬ ಪರಿಕಲ್ಪನೆ ಬೇಡ-ಆರ್‌ಎಸ್‌ಎಸ್‌

By Staff
|
Google Oneindia Kannada News

ಅಲ್ಪ ಸಂಖ್ಯಾತರೆಂಬ ಪರಿಕಲ್ಪನೆ ಬೇಡ-ಆರ್‌ಎಸ್‌ಎಸ್‌
ಮಂಗಳೂರಿನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ

ಮಂಗಳೂರು : ಭಾರತದಲ್ಲಿರುವ ಮುಸಲ್ಮಾನ ಮತ್ತು ಕ್ರೆೃಸ್ತರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬಾರದು. ಅಲ್ಪಸಂಖ್ಯಾತರೆಂಬ ಪರಿಕಲ್ಪನೆಗೆ ಶೀಘ್ರವೇ ಅಂತ್ಯ ಹಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರೆ ನೀಡಿದೆ.

ನಗರದಲ್ಲಿ ಆರಂಭಗೊಂಡಿರುವ ಆರ್‌ಎಸ್‌ಎಸ್‌ನ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಮೋಹನ್‌ ರಾವ್‌ ಭಾಗವತ್‌, ದೇಶದಲ್ಲಿರುವ ಶೇಕಡಾ 99.9ರಷ್ಟು ಮುಸ್ಲಿಮರು ಮತ್ತು ಕ್ರೆೃಸ್ತರು ಹೊರಗಿನಿಂದ ಬಂದವರಲ್ಲ. ಅವರ ಪೂರ್ವಿಕರು ಕೆಲವು ವರ್ಷಗಳ ಹಿಂದೆ ಹಿಂದುಗಳೇ ಆಗಿದ್ದರು. ಇತರ ಹಿಂದೂ ಸಮಾಜದಲ್ಲಿ ಹರಿಯುತ್ತಿರುವ ರಕ್ತವೇ ಅವರ ಮೈಯಲ್ಲೂ ಹರಿಯುತ್ತಿದೆ ಎಂದು ಹೇಳಿದರು.

ಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬುದು, ಬ್ರಿಟಿಷರು ಭಾರತೀಯ ಸಮಾಜವನ್ನು ಒಡೆಯಲು ಬಳಸಿದ ಅಸ್ತ್ರ ವಷ್ಟೆ. ವಾಸ್ತವದಲ್ಲಿ ಅಲ್ಪಸಂಖ್ಯಾತರೆಂದರೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಆಶ್ರಯ ಕೋರಿ ಬಂದವರು. ಆ ಅರ್ಥದಲ್ಲಿ ಜ್ಯೂ ಮತ್ತು ಪಾರ್ಸಿಗಳನ್ನು ಮಾತ್ರ ಅಲ್ಪಸಂಖ್ಯಾತರೆಂದು ಕರೆಯಬಹುದು. ಆದರೆ ಅವರು ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳಲು ಇಷ್ಟಪಡದೇ, ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ ಎಂದರು.

ಶಾಂತಿ ಪ್ರಕ್ರಿಯೆಗೆ ಆದ್ಯತೆ ನೀಡುವ ಆರ್‌ಎಸ್‌ಎಸ್‌ ರಾಷ್ಟ್ರದಲ್ಲಿ ಬಲಗೊಂಡಿದೆ. ದೇಶದಲ್ಲಿ ಒಟ್ಟು 49,590ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ವರ್ಷ 9,430ಸಾಪ್ತಾಹಿಕ ಸಭೆಗಳು ನಡೆದಿವೆ ಎಂದು ಮೋಹನ್‌ ರಾವ್‌ ಭಾಗವತ್‌ ಹೇಳಿದರು.

ಸಭಾದ ಬೈಠಕ್‌ನ್ನು ಅರೆಸ್ಸೆಸ್‌ ಸರಸಂಘ ಸಂಚಾಲಕ ಕು.ಸೀ.ಸುದರ್ಶನ್‌ ಉದ್ಘಾಟಿಸಿದರು. ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್‌ ಸಿಂಘಾಲ್‌, ಕಾರ್ಯದರ್ಶಿ ಪ್ರವೀಣ್‌ ಭಾಯಿ ತೊಗಾಡಿಯಾ, ರಾಮ್‌ ಮಾಧವ್‌ ಸೇರಿದಂತೆ ಸಂಘಪರಿವಾರದ 30ಸಂಘಟನೆಗಳ 1,200ಮಂದಿ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X