ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯವಾಯಿತು ಸರ್ವೋದಯ ಕರ್ನಾಟಕ ಪಕ್ಷ

By Staff
|
Google Oneindia Kannada News

ಉದಯವಾಯಿತು ಸರ್ವೋದಯ ಕರ್ನಾಟಕ ಪಕ್ಷ
ರೈತರು, ದಲಿತರು, ಬರಹಗಾರರರು ಮತ್ತು ಕಲಾವಿದರಿಂದ ಪರ್ಯಾಯ ರಾಜಕಾರಣ

ಬೆಂಗಳೂರು : ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ಒಂದು ಬಣ ಹಾಗೂ ವಿವಿಧ ಸಂಘಟನೆಗಳು ಕೈಜೋಡಿಸಿರುವ ನೂತನ ‘ಸರ್ವೋದಯ ಕರ್ನಾಟಕ’ ಪಕ್ಷ ಗುರುವಾರ ಉದಯವಾಗಿದೆ.

ಮಿಲ್ಲರ್‌ ರಸ್ತೆಯ ಅಂಬೇಡ್ಕರ್‌ಭವನದಲ್ಲಿ ನಡೆದ ಸಮಾರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಹೊಸ ಪಕ್ಷಕ್ಕೆ ಪಕ್ಷದ ಅಧ್ಯಕ್ಷ ಹಾಗೂ ಸಾಹಿತಿ ದೇವನೂರ ಮಹಾದೇವ ಚಾಲನೆ ನೀಡಿ ಮಾತನಾಡಿದರು.

ಪಕ್ಷದ ವತಿಯಿಂದ ನನ್ನೂರಿಗೆ ನನ್ನ ಕೈಲಾದಷ್ಟು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಜನರ ಸಮಿತಿ ರಚಿಸಲಾಗುವುದು. ಪರಸ್ಥಳದಲ್ಲಿರುವ ತಮ್ಮೂರಿನ ಅನುಕೂಲಸ್ಥರ ನೆರವು ಪಡೆದು ಈ ಸಮಿತಿ, ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಲಿದೆ. ನೀರನ್ನು ಮಿತವಾಗಿ ಬಳಕೆ ಮಾಡುವ ಸುಭಾಷ್‌ ಪಾಳೇಕಾರ್‌ ನೈಸರ್ಗಿಕ ಪದ್ಧತಿಯನ್ನು ಅನುಷ್ಠಾನಗೊಳಿಸಿ ರೈತರಿಗೆ ಶಕ್ತಿತುಂಬುವುದಾಗಿ ದೇವನೂರು ಮಹಾದೇವ ಹೇಳಿದರು.

ನಿರ್ಣಯ : ಕಟೌಟ್‌ ಹಾಕಬಾರದು, ವ್ಯಕ್ತಿ ಪೂಜೆ ಬೇಡ, ಪ್ರತಿಕೃತಿ ದಹನ ಹಾಗೂ ಅನಾವಶ್ಯಕ ರಸ್ತೆ ತಡೆ ಬೇಡ, ಇನ್ನೊಬ್ಬರ ವಿರುದ್ಧ ಧಿಕ್ಕಾರ ಹಾಕಬಾರದು, ಸೇರಿದಂತೆ ವಿವಿಧ ನಿರ್ಣಯಗಳನ್ನು ಈ ಸಂದಭದಲ್ಲಿ ಕೈಗೊಳ್ಳಲಾಯಿತು.

ವಕೀಲ ಪ್ರೊ. ರವಿವರ್ಮ, ದಲಿತ ಸಂಘರ್ಷ ಸಮಿತಿಯ ಸಿ.ಎಂ.ಮುನಿಯಪ್ಪ, ಪಕ್ಷದ ಕಾರ್ಯಾಧ್ಯಕ್ಷ ಕೆ.ಎಸ್‌.ಪುಟ್ಟಣ್ಣಯ್ಯ, ಇಂದೂಧರ ಹೊನ್ನಾಪುರ, ಗುರುಪ್ರಸಾದ್‌ ಕೆರಗೋಡು, ಪ್ರೊ.ಸಿ.ಜಿ.ಕೃಷ್ಣಸ್ವಾಮಿ, ಡಾ.ಬಂಜಗೆರೆ ಜಯಪ್ರಕಾಶ್‌, ನಟ ರಾಘವೇಂದ್ರ ರಾಜ್‌ಕುಮಾರ್‌, ಡಾ.ಸಿ.ಎಸ್‌.ದ್ವಾರಕನಾಥ್‌, ಬಾನು ಮುಷ್ತಾಕ್‌, ಪ್ರೊ.ಕೆ.ಸಿ.ಬಸವರಾಜು, ಕೆ.ಎಸ್‌.ನಂಜುಡೇಗೌಡ, ಪ್ರೊ.ರಾಮದಾಸ್‌, ಅಗ್ನಿ ಶ್ರೀಧರ್‌ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X