• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್‌ : ರೈತರ ಮೂಗಿಗೆ ಯಥಾಪ್ರಕಾರ ತುಪ್ಪ,ಗ್ರಾಮೀಣ ಅಭಿವೃದ್ಧಿ ಎನ್ನುವ ಹಳೇ ಸ್ಲೋಗನ್‌!

By Staff
|

ಬಜೆಟ್‌ : ರೈತರ ಮೂಗಿಗೆ ಯಥಾಪ್ರಕಾರ ತುಪ್ಪ,

ಗ್ರಾಮೀಣ ಅಭಿವೃದ್ಧಿ ಎನ್ನುವ ಹಳೇ ಸ್ಲೋಗನ್‌!

ವರ್ತಕರಿಗೆ ತೆರಿಗೆ ಏಟು, ರೈತರ ಮೂಗಿಗೆ ಯಥಾಪ್ರಕಾರ ತುಪ್ಪ, ಗ್ರಾಮೀಣ ಅಭಿವೃದ್ಧಿ ಎನ್ನುವ ಹಳೇ ಸ್ಲೋಗನ್‌, ಮೆಟ್ರೋ ರೈಲಿಗೆ , ಏರ್‌ಪೋರ್ಟಿಗೆ ಮೂರು ಕಾಸು ಹಣ, ಐಟಿ ಬಗ್ಗೆ ಗಪ್‌ಚುಪ್‌ ರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರಕಾರದ ಚೊಚ್ಚಲ ಮುಂಗಡಪತ್ರವನ್ನು ಇಂದು ಮಂಡಿಸಿದ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಮೌಲ್ಯವರ್ಧಿತ ತೆರಿಗೆ(ವ್ಯಾಟ್‌)ಯನ್ನು ಏಪ್ರಿಲ್‌2005ರಿಂದ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದರು.

ಪ್ರಸಕ್ತ ಸಾಲಿನಿಂದಲೇ ಕೇಂದ್ರದ ಸಹಕಾರದೊಂದಿಗೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಸರಕಾರ ಸಜ್ಜಾಗಿದೆ. ಪೆಟ್ರೋಲ್‌, ಡೀಸೆಲ್‌, ವಿಮಾನ ಇಂಧನ ಮತ್ತು ಕಬ್ಬಿಗೆ ವ್ಯಾಟ್‌ನಿಂದ ವಿನಾಯಿತಿ ನೀಡಲಾಗಿದೆ. ಅಕ್ಕಿ, ಗೋಧಿ, ವಿವಿಧ ಬೀಜಗಳು, ಬ್ರಾಂಡೆಡ್‌ ಬ್ರೆಡ್‌ ಮತ್ತು ಬನ್‌ಗಳಿಗೆ ಒಂದು ವರ್ಷಗಳ ಕಾಲ ಮೌಲ್ಯವರ್ಧಿತ ತೆರಿಗೆಯಿಂದ ವಿನಾಯಿತಿ ನೀಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು. ವ್ಯಾಟ್‌ ಅನುಷ್ಠಾನದಿಂದ ರಾಜ್ಯಕ್ಕೆ ಈ ವರ್ಷ 2,160ಕೋಟಿ ರೂ.ನಷ್ಟವಾಗಲಿದೆ. ಮೊದಲ ವರ್ಷದ ನಷ್ಟವನ್ನು ಕೇಂದ್ರ ತುಂಬಿಕೊಡಲಿದೆ. ಎರಡನೇ ವರ್ಷ ಶೇ.75ರಷ್ಟು, ಮೂರನೇ ವರ್ಷ ಶೇ.50ರಷ್ಟು ನಷ್ಟವನ್ನು ಕೇಂದ್ರ ಸರಕಾರ ತುಂಬಿಕೊಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಖ್ಯಾಂಶಗಳು :

  • ಕಂದಾಯ ಮೂಲದಿಂದ 29,218.47ರೂ. ಹಾಗೂ ಮತ್ತಿತರ ಮೂಲಗಳಿಂದ 5373ಕೋಟಿ ರೂ. ಸೇರಿದಂತೆ 2005-06ರಲ್ಲಿ ಸಾಲಿನಲ್ಲಿ 34,592.47ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ನಿರೀಕ್ಷಿತ ವೆಚ್ಚ 34,615.15ಕೋಟಿ.
  • ಸರಕಾರ ಹೆಚ್ಚುವರಿಯಾಗಿ ಈ ವರ್ಷ ತೆರಿಗೆ ಮೂಲಗಳಿಂದ 18,680.16ಕೋಟಿ, ತೆರಿಗೆಯೇತರ ಮೂಲಗಳಿಂದ 4090.30ಕೋಟಿ ರೂ. ಸಂಗ್ರಹಿಸುವು ಗುರಿ ಹೊಂದಿದೆ.
  • ಮಾರುಕಟ್ಟೆ ವರ್ತಕರಮೇಲಿನ ಕರದ ಮೂಲಕ 1269ಕೋಟಿ, ಕೇಂದ್ರದ ಸಾಲ ಮತ್ತು ಇತರ ನಿಧಿಗಳ ಮೂಲಕ 2191.12ಕೋಟಿ, ಆರ್‌ಬಿಐ ಸೇರಿದಂತೆ ವಿವಿಧ ಹಣಕಾಸು ಸಂಸ್ಧೆಗಳಿಂದ 1015 ಕೋಟಿ ಹೆಚ್ಚುವರಿ ಹಣವನ್ನು ಸರಕಾರ ನಿರೀಕ್ಷಿಸುತ್ತಿದೆ.
  • ರೈತರ ಕೃಷಿ ಸಾಲದ ಮೇಲಿನ 450 ಕೋಟಿರೂ. ಬಡ್ಡಿ ಚಕ್ರಬಡ್ಡಿ ಮನ್ನಾ ಮಾಡಿ, ಕೃಷಿಕರಿಗೆ ಸಬ್ಸಿಡಿ ನೀಡಲು 80ಕೋಟಿ ರೂಗಳನ್ನು. ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
  • ಬೆಳೆ ವಿಮೆಗಾಗಿ 200ಕೋಟಿ ರೂ. ಹಣ.
  • ಕೃಷಿ ಸಾಲ ಪಡೆಯುವ ಸಂದರ್ಭದಲ್ಲಿ ವಸೂಲು ಮಾಡಲಾಗುತ್ತಿದ್ದ ಶೇ.1ರಷ್ಟು ನೋಂದಣಿ ಶುಲ್ಕ ರದ್ಧು
  • ಕೃಷಿ ಸಂಶೋಧನೆಗಾಗಿ 27ಕೋಟಿ ರೂ. ಮೀಸಲಿಡಲಾಗಿದೆ.
  • ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಲು 32.4ಕೋಟಿ ರೂ.
  • ಸಣ್ಣ ನೀರಾವರಿ ಉದ್ದೇಶಕ್ಕಾಗಿ 447ಕೋಟಿ ರೂ. ಮೀಸಲು.
  • ವಿದ್ಯುತ್‌ಗೆ 1,750ಕೋಟಿ ಸಬ್ಸಿಡಿ ನೀಡಿದ್ದು, ಎಲ್ಲಾ ರೀತಿಯ ಸೋರಿಕೆಯನ್ನು ತಡೆಗಟ್ಟಲು ಕಾರ್ಯಕ್ರಮ ರೂಪಿಸಲಾಗಿದೆ. ಶೇ.100 ಕ್ಕೆ ನೂರರಷ್ಟು ವಿದ್ಯುತ್‌ ಮೀಟರ್‌ಗಳನ್ನು ಅಳವಡಿಸುವ ಗುರಿಹೊಂದಲಾಗಿದೆ.
  • ವಾಹನೋದ್ಯಮದ ಮೇಲೆ ಬಜೆಟ್‌ ಕೆಂಗಣ್ಣು ಬೀರಿದೆ. ಆ ಪರಿಣಾಮ ದ್ವಿಚಕ್ರವಾಹನಗಳ ಬೆಲೆಯಲ್ಲಿ ತುಸು ಏರಿಕೆ.
  • ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಭಾರತದಾದ್ಯಂತ ಪರವಾನಗಿ ಪಡೆದ ಬಸ್ಸುಗಳಿಗೆ ಮತ್ತು ವಾಯುನಿಯಂತ್ರಕ ಬಸ್‌ಗಳಿಗೆ ತೆರಿಗೆಯಲ್ಲಿ ತುಸು ರಿಯಾಯಿತಿ.
  • ಟೀ ಮೇಲಿನ ಶೇ.4ರಷ್ಟು ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಅಂತರರಾಜ್ಯ ದ್ವಿಚಕ್ರ, ತ್ರಿಚಕ್ರವಾಹನಗಳ ಮಾರಾಟ ಮತ್ತು ಕೈಮಗ್ಗದ ವಸ್ತ್ರಗಳ ಮೇಲೆ ಸಮ್ಮಿಶ್ರ ಸರಕಾರಕ್ಕೆ ಕರುಣೆ ಬಂದಿದ್ದು, ಶೇ.4ರಷ್ಟು ತೆರಿಗೆ ಕಡಿತ.
  • ಮೆಟ್ರೋ ರೈಲು ಯೋಜನೆಗೆ 109 ಕೋಟಿ ರೂಪಾಯಿ ಮೀಸಲು.
  • ಬೆಂಗಳೂರಿನಲ್ಲಿ ಉದ್ದೇಶಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 95 ಕೋಟಿ ಹಣ.
  • ಇತರೆ ರೈಲ್ವೆಯೋಜನೆಗಳಿಗಾಗಿ ಬಜೆಟ್‌ನಲ್ಲಿ 51 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more