ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಸ್ಥಾನಕ್ಕೆ ಎಸ್‌.ಬಂಗಾರಪ್ಪ ರಾಜೀನಾಮೆ

By Staff
|
Google Oneindia Kannada News

ಲೋಕಸಭಾ ಸ್ಥಾನಕ್ಕೆ ಎಸ್‌.ಬಂಗಾರಪ್ಪ ರಾಜೀನಾಮೆ
ಇನ್ಮುಂದೆ ಭಾಜಪಕ್ಕೆ ಬೈಬೈ, ಸಮಾಜವಾದಿ ಪಕ್ಷಕ್ಕೆ ಜೈಜೈ!

ನವದೆಹಲಿ : ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಸಂಸದ ಎಸ್‌.ಬಂಗಾರಪ್ಪ ತಮ್ಮ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿ ಲೋಕಸಭಾ ಸದಸ್ಯರಾಗಿದ್ದ ಬಂಗಾರಪ್ಪ ರಾಜೀನಾಮೆ ಸಲ್ಲಿಸಿರುವ ಸಂಗತಿಯನ್ನು ಲೋಕ ಸಭೆ ಸ್ಪೀಕರ್‌ ಸೋಮನಾಥ ಚಟರ್ಜಿ, ಪ್ರಶ್ನೋತ್ತರ ಅವಧಿಯಲ್ಲಿ ಸ್ಪಷ್ಟಪಡಿಸಿದರು.

ಸಮಾಜವಾದಿ ಎಂದೇ ಗುರ್ತಿಸಿಕೊಂಡಿರುವ 72ವರ್ಷದ ಬಂಗಾರಪ್ಪ ಹೊಸ ಉತ್ಸಾಹದಿಂದ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷವನ್ನು ಸಂಘಟಿಸಲು ಮುಂದಾಗಿದ್ದಾರೆ. 1933ರಲ್ಲಿ ಜನಿಸಿದ ಬಂಗಾರಪ್ಪ 1992- 94ರ ಅವಧಿಯಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು.

ಬಿಜೆಪಿ ಪ್ರತಿಕ್ರಿಯೆ : ಬಂಗಾರಪ್ಪ ಪಕ್ಷಕ್ಕೆ ಬಂದಾಗ ಸ್ವಾಗತಿಸಿದ್ದೆವು. ಈಗ ಶುಭ ಕೋರುತ್ತಲೇ ವಿದಾಯ ಹೇಳುತ್ತೇವೆ. ಅವರ ಧೋರಣೆಗಳಿಂದ ಬಿಜೆಪಿಗೆ ಯಾವುದೇ ನಷ್ಟವಾಗದು ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X