ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ಬಸ್ಸಿಗೆ ಡ್ರೆೃವರಮ್ಮ ಬಂದಳು ದಾರಿ ಬಿಡಿ!

By Staff
|
Google Oneindia Kannada News

ಕೆಎಸ್‌ಆರ್‌ಟಿಸಿ ಬಸ್ಸಿಗೆ ಡ್ರೆೃವರಮ್ಮ ಬಂದಳು ದಾರಿ ಬಿಡಿ!
ಬಹುದಿನಗಳ ಕನಸು ಈಗ ಫಲಿಸಿದೆ, ನನ್ನ ಕೈಗೆ ಸ್ಟೈರಿಂಗ್‌ ಬಂದಿದೆ -ನಿಂಗಮ್ಮ

ಬೆಂಗಳೂರು : ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಈ ವರ್ಷ ಅಪರೂಪದ ಕಾಣಿಕೆ ನೀಡಿದೆ.

ಸಂಸ್ಥೆ ಸಹನಾ ಎಂಬ ವಿಶೇಷ ಬಸ್‌ ಸೇವೆ ಆರಂಭಿಸಿದ್ದು, ಮಹಿಳಾ ಚಾಲಕಿಯನ್ನು ನೇಮಕ ಮಾಡಿದೆ. ಕೆಎಸ್‌ಆರ್‌ಟಿಸಿಯ ಮೊದಲ ಮಹಿಳಾ ಚಾಲಕಿಯಾಗಿ ನಿಂಗಮ್ಮ(35) ನೇಮಕಗೊಂಡಿದ್ದಾರೆ.

ಈ ಬಗ್ಗೆ ಹೆಮ್ಮೆ ಹೊಂದಿರುವ ನಿಂಗಮ್ಮ ಅವರ ಕನಸು ಕಡೆಗೂ ನನಸಾಗಿದೆ. ನಾಲ್ಕು ವರ್ಷಗಳ ಹಿಂದೆಯೇ ಚಾಲಕಿ-ಮತ್ತು-ನಿರ್ವಾಹಕಿಯಾಗಿ ಆಯ್ಕೆಯಾಗಿದ್ದರೂ, ಮೇಲಾಧಿಕಾರಿಗಳ ಮನವೊಲಿಸಿ ಡ್ರೆೃವರ್‌ ಆಗಲು ಇಷ್ಟು ವರ್ಷ ಕಾಯಬೇಕಾಯಿತು.

ಉತ್ತರ ಕರ್ನಾಟಕದಲ್ಲಿ ಕಂಡಕ್ಟರ್‌ ಆಗಿ ಕಾರ್ಯನಿರ್ವಹಿಸಿದ್ದ ನಿಂಗಮ್ಮ, ಕೆಲ ತಿಂಗಳುಗಳ ಹಿಂದೆ ಮೈಸೂರಿಗೆ ವರ್ಗಾವಣೆಯಾಗಿ ಬಂದರು. ಇಲ್ಲಿ ಅವರಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆತು, ಒಂದು ತಿಂಗಳ ಕಾಲ ಸೂಕ್ತ ತರಬೇತಿ ಪಡೆದರು. ನಿಂಗಮ್ಮನಿಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಸುಧಾರಾವ್‌ ಬಸ್‌ಚಾಲನೆಗೆ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ನಿಂಗಮ್ಮನ ಕಣ್ಣು ಆನಂದದಿಂದ ತೇವಗೊಂಡಿತ್ತು.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯವರಾದ ನಿಂಗಮ್ಮ ಅವರ ಪತಿ ಕಾನೂನು ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದು, ಪತ್ನಿಯ ಬಯಕೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X