ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಕಚೇರಿಯಲ್ಲಿ ಬಾಂಬ್‌? ಪೋಲೀಸರ ತನಿಖೆ

By Staff
|
Google Oneindia Kannada News

ವಿಪ್ರೋ ಕಚೇರಿಯಲ್ಲಿ ಬಾಂಬ್‌? ಪೋಲೀಸರ ತನಿಖೆ
ನಗರದ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಆತಂಕದ ಕಾರ್ಮೋಡ

ಬೆಂಗಳೂರು : ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿನ ವಿಪ್ರೋ ಕಚೇರಿಯಲ್ಲಿ ಬಾಂಬ್‌ ನೆಡಲಾಗಿದೆ ಎಂಬ ಅನಾಮಿಕ ದೂರವಾಣಿ ಕರೆಗೆ ಸ್ಪಂದಿಸಿದ ಪೋಲೀಸರು ಬಾಂಬ್‌ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಬುಧವಾರ ಬೆಳಿಗ್ಗೆ ಅನಾಮಿಕ ಕರೆ ಬಂದ ತಕ್ಷಣ ಪೋಲೀಸರು ಶ್ವಾನದಳ ಮತ್ತು ಲೋಹಶೋಧಕ ತಂಡದೊಂದಿಗೆ ಸ್ಥಳಕ್ಕೆ ತೆರಳಿ, ತನಿಖಾ ಕಾರ್ಯವನ್ನು ಕೈಗೊಂಡಿದ್ದಾರೆ. ವ್ಯಕ್ತಿಗಳ ದೈಹಿಕ ತಪಾಸಣೆ ಜೊತೆಗೆ ಕಟ್ಟಡದ ಎಲ್ಲಾ ಭಾಗಗಳನ್ನು ತಪಾಸಣೆ ಮಾಡುತ್ತಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

ಟೈಂಸ್‌ ಆಫ್‌ ಇಂಡಿಯಾ ಪತ್ರಿಕೆಯ ಕಾರ್ಯಾಲಯ ಇದೇ ಬಹುಮಹಡಿ ಕಟ್ಟಡದಲ್ಲಿದೆ. ಸಾಫ್ಟ್‌ವೇರ್‌ ದಿಗ್ಗಜ ವಿಪ್ರೋದ ಮುಖ್ಯ ಕ್ಯಾಂಪಸ್‌ ನಗರದ ಹೊರವಲಯದ ಸರ್ಜಾಪುರ ರಸ್ತೆಯಲ್ಲಿದೆ.

ನಗರದ ಸಾಫ್ಟ್‌ವೇರ್‌ ಕಂಪನಿಗಳ ಮೇಲೆ ದಾಳಿ ಮಾಡುವ ಉಗ್ರರ ಹುನ್ನಾರ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಅಲ್ಲದೇ ಮದ್ದುಗುಂಡುಗಳು ಹಾಗೂ ಮಾರಕಾಯುಧಗಳ ಚೀಲಗಳು ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಪತ್ತೆಯಾಗಿದ್ದವು. ಈ ಘಟನೆಗಳಿಂದಾಗಿ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

(ಪಿಟಿಐ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X