ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿತ್ತೂರು ರಾಣಿ ಚೆನ್ಮಮ್ಮ ಪ್ರಶಸ್ತಿ : ಸಾಧಕಿಯರ ಆಯ್ಕೆ

By Staff
|
Google Oneindia Kannada News

ಕಿತ್ತೂರು ರಾಣಿ ಚೆನ್ಮಮ್ಮ ಪ್ರಶಸ್ತಿ : ಸಾಧಕಿಯರ ಆಯ್ಕೆ
ವಿಶ್ವಮಹಿಳಾ ದಿನಾಚರಣೆಯಂದು ಪ್ರಶಸ್ತಿ ವಿತರಣೆ -ಭಾಗೀರಥಿ ಮರುಳಸಿದ್ದನಗೌಡ

ಬೆಂಗಳೂರು : ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದ ಐದು ಮಹಿಳಾ ಸಂಸ್ಥೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಹಿಳೆಯರನ್ನು ಪ್ರಸಕ್ತ ಸಾಲಿನ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಗರದಲ್ಲಿ ಮಾರ್ಚ್‌ 8ರಂದು ನಡೆಯಲಿರುವ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿಗಳನ್ನು ವಿತರಿಸುವುದಾಗಿ ಮಕ್ಕಳು ಮತ್ತು ಮಹಿಳಾ ಕಲ್ಯಾಣ ಸಚಿವೆ ಭಾಗೀರಥಿ ಮರುಳಸಿದ್ದನಗೌಡ ತಿಳಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತರು :

ಉಮಾ ಜಯಕುಮಾರ್‌(ಬೆಂಗಳೂರು), ಸಿ.ಎಸ್‌.ಮಹಾಲಕ್ಷ್ಮಿ(ಬಸವನಗುಡಿ), ಸಾವಿತ್ರಿ ಮಜುಮದಾರ್‌(ಕೊಪ್ಪಳ), ಶಕುಂತಲಾ ಭಟ್‌(ದಕ್ಷಿಣ ಕನ್ನಡ), ಎಂ.ಪ್ರೇಮಗೌಡ(ಬಳ್ಳಾರಿ), ಗುರಮ್ಮ ಸಿದ್ದರೆಡ್ಡಿ(ಬೀದರ್‌), ನಂದಿನಿ ಶಿವಪ್ರಕಾಶ್‌(ಚಿತ್ರದುರ್ಗ), ಎಂ.ಎಸ್‌.ರಾಣಿ(ಮಂಡ್ಯ), ವೆಂಕಟಲಕ್ಷಮ್ಮ(ಬೆಂಗಳೂರು), ಕಮಲಾ ಹೆಮ್ಮಿ(ಧಾರವಾಡ)
ಪ್ರಶಸ್ತಿ ವಿಜೇತ ಸಂಸ್ಥೆಗಳು :

  • ಶ್ರೀ ರಾಜರಾಜೇಶ್ವರಿ ಯುವತಿ ಮಂಡಳಿ(ಬೆಂಗಳೂರು ಜಿಲ್ಲೆ)
  • ರಾಮದುರ್ಗದ ಕಸ್ತೂರಬಾ ಶಿಕ್ಷಣ ಹಾಗೂ ಗ್ರಾಮೀಣ ಸಂಸ್ಥೆ(ಬೆಳಗಾವಿ ಜಿಲ್ಲೆ)
  • ಮಾಯಕೊಂಡದ ಗಾಯತ್ರಿ ಗ್ರಾಮೀಣ ವಿದ್ಯಾ ಸಂಸ್ಥೆ(ದಾವಣಗೆರೆ ಜಿಲ್ಲೆ)
  • ಚಿಂತಾಮಣಿ ಅಗ್ರಹಾರದ ಲಲಿತ ಕಲಾಸಂಘ(ಕೋಲಾರ ಜಿಲ್ಲೆ)
  • ಮಾಗಡಿ ತಾಲ್ಲೂಕು ಮಹಿಳಾ ವಿವಿಧೋದ್ದೇಶ ಸೇವಾ ಸಹಕಾರ ಸಂಘ(ಬೆಂಗಳೂರು ಗ್ರಾಮಾಂತರ ಜಿಲ್ಲೆ)
ಪ್ರಶಸ್ತಿ ಪಡೆದ ಸ್ತ್ರೀಶಕ್ತಿ ತಂಡಗಳು :

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಡಲಕಟ್ಟೆ ಗ್ರಾಮದ ಶ್ರೀ ಮಹಾಲಕ್ಷ್ಮಿ ಸ್ತ್ರೀಶಕ್ತಿ ಸಂಘಕ್ಕೆ ಮೊದಲ ಬಹುಮಾನ, ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪರಮಾಚನಹಳ್ಳಿ ಭಾರತ ಕೋಗಿಲೆ ಸ್ತ್ರೀಶಕ್ತಿ ಗುಂಪು ಮತ್ತು ದಾವಣಗೆರೆ ಜಿಲ್ಲೆ ನೀಲಹಳ್ಳಿಯ ಶ್ರೀಆದಿಶಕ್ತಿ ಸ್ತ್ರೀಶಕ್ತಿ ಗುಂಪಿಗೆ ಎರಡನೇ ಬಹುಮಾನ ಲಭಿಸಿದೆ.

ಕೊಡಗು ಜಿಲ್ಲೆ ಯ ಗೋಣಿಕೊಪ್ಪಲು ಗ್ರಾಮದ ನವನೀತ ಸ್ತ್ರೀಶಕ್ತಿ ಗುಂಪಿಗೆ ಮೂರನೇ ಬಹುಮಾನ ಲಭಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X