ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳಿ ಸೈನಿಕರ ದಾಳಿ : 70 ಮಾವೋವಾದಿಗಳ ಬಲಿ

By Staff
|
Google Oneindia Kannada News

ನೇಪಾಳಿ ಸೈನಿಕರ ದಾಳಿ : 70 ಮಾವೋವಾದಿಗಳ ಬಲಿ
ಗಣೇಶ್‌ ಪುರ ಸಮೀಪ ಸೈನಿಕರು-ಉಗ್ರರ ನಡುವೆ ಗುಂಡಿನ ಚಕಮಕಿ

ಕಠ್ಮಂಡು : ನೇಪಾಳಿ ಸೈನಿಕರು ಮತ್ತು ಮಾವೋವಾದಿಗಳ ನಡುವೆ ಸೋಮವಾರ ರಾತ್ರಿಯಿಂದ ನಡೆದ ಗುಂಡಿನ ಚಕಮಕಿಯಲ್ಲಿ 70 ಮಂದಿ ಮಾವೋವಾದಿಗಳು ಸತ್ತಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಮೂರು ಮಂದಿ ಬ್ರಿಗೇಡ್‌ ಕಮಾಂಡರ್‌ಗಳು ಹಾಗೂ 70 ಮಂದಿ ಮಾವೋ ಉಗ್ರರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕಠ್ಮಂಡುಗೆ 600ಕಿ.ಮೀ ದೂರದ ಗಣೇಶ್‌ಪುರ್‌ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್‌ಗಳನ್ನು ಬಳಸಿ ನೇಪಾಳಿ ಸೈನಿಕರು ದಾಳಿ ನಡೆಸಿದ್ದಾರೆ.

ಸಾವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಅತ್ಯಾಧುನಿಕ ಆಸ್ತ್ರಗಳನ್ನು ಬಳಸಿದ ಮಾವೋ ಉಗ್ರರು ವ್ಯಾಪಕ ಪ್ರತಿರೋಧವೊಡ್ಡಿದರು ಎಂದು ಕಠ್ಮಂಡು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X