ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಂದಿಗೆ ಇನ್ಮುಂದೆ ಉಪಕರಗಳ ಕಿರಿಕಿರಿ

By Staff
|
Google Oneindia Kannada News

ಬೆಂಗಳೂರು ಮಂದಿಗೆ ಇನ್ಮುಂದೆ ಉಪಕರಗಳ ಕಿರಿಕಿರಿ
ಪ್ರತಿಪಕ್ಷಗಳ ಸಭಾತ್ಯಾಗ ಹಾಗೂ ಪ್ರತಿರೋಧದ ನಡುವೆಯೇ ಮಹಾನಗರಪಾಲಿಕೆ ನಿರ್ಣಯ

ಬೆಂಗಳೂರು : ಪಾರ್ಕಿಂಗ್‌ ಶುಲ್ಕವನ್ನು ಕೈಬಿಟ್ಟು, ವಾಹನ ಚಾಲಕರಿಗೆ ಖುಷಿ ನೀಡಿದ್ದ ಬೆಂಗಳೂರು ಮಹಾನಗರ ಪಾಲಿಕೆ, ಈಗ ವಿವಿಧ ಉಪಕರಗಳನ್ನು ನಾಗರೀಕರ ಮೇಲೆ ವಿಧಿಸಲು ನಿರ್ಧರಿಸಿದೆ.

ಏಪ್ರಿಲ್‌ 1ರಿಂದ ಹೊಸ ಉಪಕರಗಳ ಬಿಸಿ ತಾಕುವ ಸಾಧ್ಯತೆಗಳಿವೆ. ಗುರುವಾರ ಪಾಲಿಕೆಯ ಮೇಯರ್‌ ಆರ್‌.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಮಂಡಿಸಲಾಗಿದೆ.

ಸರಕಾರದ ಬೆಂಗಳೂರು ಸೇರಿದಂತೆ ರಾಜ್ಯದ ಆರು ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸೂಚಿಸಿದ ಬೆನ್ನಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದೆ.

ಕರದ ಬಿಸಿ(ವಾರ್ಷಿಕ) : ದ್ವಿಚಕ್ರ ವಾಹನ -ರೂ.50, ತ್ರಿಚಕ್ರ ವಾಹನ -ರೂ. 100, ನಾಲ್ಕು ಚಕ್ರದ ವಾಹನ -ರೂ.300, ಭಾರಿ/ಮಧ್ಯಮ ವಾಹನ -ರೂ.400ನ್ನು ವರ್ಷಕ್ಕೊಮ್ಮೆ ಪಾವತಿಸಬೇಕು.

ವಸತಿ, ಹೋಟೆಲ್‌, ಬೇಕರಿಗಳ ಘನ ತ್ಯಾಜ್ಯ ಸಂಗ್ರಹಣೆಗೆ ಶೇ.25ರಷ್ಟು ಸೇವಾ ಶುಲ್ಕವನ್ನು ವಿಧಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ತೆರಿಗೆ ನೀತಿ ಪ್ರಕಾರ 1000ಚದರಡಿ ವಿಸ್ತೀರ್ಣ, 1001ರಿಂದ 3000ಚದರಡಿ ವಿಸ್ತೀರ್ಣ, 3001ಕ್ಕಿಂದ ಮೇಲ್ಪಟ್ಟ ವಿಸ್ತೀರ್ಣದ ವಸತಿ ಕಟ್ಟಡಗಳು ಕ್ರಮವಾಗಿ 100, 200 ಹಾಗೂ 300ರೂಪಾಯಿಗಳನ್ನು ಮಾಸಿಕ ತೆರಿಗೆಯಾಗಿ ಪಾವತಿಸಬೇಕು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X