ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 700 ಕೋಟಿ ಅಕ್ರಮ ಅಫೀಮು ಬೆಳೆ ಪತ್ತೆ

By Staff
|
Google Oneindia Kannada News

ರಾಜ್ಯದಲ್ಲಿ 700 ಕೋಟಿ ಅಕ್ರಮ ಅಫೀಮು ಬೆಳೆ ಪತ್ತೆ
ಕರ್ನಾಟಕದ ಪೋಲೀಸರು ಅಫೀಮು ಮಾಫಿಯಾದ ಬೆನ್ನತ್ತಿದ್ದಾರೆ

ಬೆಂಗಳೂರು : ಅಕ್ರಮ ಅಫೀಮು ಬೆಳೆ ವಶಪಡಿಸಿಕೊಳ್ಳುವ ಪ್ರಕ್ರಿಯೆ ರಾಜ್ಯದೆಲ್ಲೆಡೆ ಮುಂದುವರೆದಿದೆ. ಬೀದರ್‌ನಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 200ಕೋಟಿ ಮೌಲ್ಯದ ಅಫೀಮು ಬೆಳೆಯನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಕೋಲಾರದಿಂದ ಉಡುಪಿವರೆಗೆ, ಮಂಡ್ಯದಿಂದ ಬೀದರ್‌ವರೆಗೆ ಸೇರಿದಂತೆ ರಾಜ್ಯಾದ್ಯಂತ ಅಫೀಮು ಮಾಫಿಯಾ ವ್ಯಾಪಿಸಿರುವುದು ಸಾಬೀತಾಗಿದೆ. ಬೀದರ್‌ನಲ್ಲಿ ಈ ಸಂಬಂಧ ಎಂಟು ರೈತರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಸಗಸೆ ಅಥವಾ ಅಫೀಮು ಎಂದು ಕರೆಸಿಕೊಳ್ಳುವ ಈ ಬೆಳೆಯನ್ನು ರೈತರು ತಿಳಿದು ಮಾಡಿದ್ದಾರೆಯೇ, ಅಥವಾ ತಿಳಿಯದೇ ಮಾಡಿದ್ದಾರೆಯೇ ಎಂಬ ತನಿಖೆ ಆರಂಭಗೊಂಡಿದೆ. ರಾಜ್ಯದೆಲ್ಲೆಡೆ ನಡೆಸಲಾದ ವಿವಿಧ ದಾಳಿಗಳ ಮೂಲಕ ಪೋಲೀಸರು ಸುಮಾರು 700ಕೋಟಿಗೂ ಅಧಿಕ ಮೊತ್ತದ ಅಕ್ರಮ ಅಫೀಮು ಬೆಳೆಯನ್ನು ಪತ್ತೆ ಹಚ್ಚಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X