ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿತಾರ್‌ ಮಾಂತ್ರಿಕ ರವಿಶಂಕರ್‌ಗೆ ನೊಬೆಲ್‌ ದಕ್ಕಲಿ

By Staff
|
Google Oneindia Kannada News

ಸಿತಾರ್‌ ಮಾಂತ್ರಿಕ ರವಿಶಂಕರ್‌ಗೆ ನೊಬೆಲ್‌ ದಕ್ಕಲಿ
2005ನೇ ಸಾಲಿನ ನೊಬೆಲ್‌ ಆಯ್ಕೆ ಸಮಿತಿಯ ಮುಂದೆ ರವಿಶಂಕರ್‌ ಹೆಸರು

ವಾಷಿಂಗ್ಟನ್‌ : ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾರತದ ಖ್ಯಾತ ಸಿತಾರ್‌ ವಾದಕ ಪಂಡಿತ್‌ ರವಿಶಂಕರ್‌ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಗಣ್ಯರನ್ನು ನಾಮನಿರ್ದೇಶನಗೊಳಿಸಲಾಗಿದೆ.

ಅಮೆರಿಕದ ಮಾಜಿ ವಿದೇಶಾಂಗ ಸಚಿವ ಕಾಲಿನ್‌ ಪಾವೆಲ್‌, ಪೋಪ್‌ ಜಾನ್‌ ಪಾಲ್‌ ಮತ್ತು ಖ್ಯಾತ ರಾಕ್‌ ಗಾಯಕ ಬೊನೊ ಮತ್ತಿತರರ ಹೆಸರುಗಳು ಪಟ್ಟಿಯಲ್ಲಿವೆ. ಸಿತಾರ್‌ ವಾದಕ ರವಿಶಂಕರ್‌ ಹೆಸರು ಆಯ್ಕೆ ಸಮಿತಿಯ ಪಟ್ಟಿಯಲ್ಲಿ ದಾಖಲಾಗಿರುವುದು, ಭಾರತಕ್ಕೆ ಮತ್ತೊಂದು ನೊಬೆಲ್‌ ಪ್ರಶಸ್ತಿಯ ಕನಸು ಮೂಡಿಸಿದೆ.

ವಿಷಾದ : ವಿಶ್ವದ ಪ್ರತಿಷ್ಠಿತ ಗೌರವೆಂದೇ ಗುರ್ತಿಸಲಾಗುವ ನೊಬೆಲ್‌ ಪ್ರಶಸ್ತಿ ಮಹಾತ್ಮ ಗಾಂಧಿಗೆ ದಕ್ಕದ ಬಗೆಗೆ ಸಮಿತಿಯ ಅಧ್ಯಕ್ಷ ಓಲ್‌ ದಾನ್‌ ಬೋಲ್ಟ್‌ ಜೋಸ್‌ ವಿಷಾದ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X