• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಪಾಕ್‌ ಕ್ರಿಕೆಟ್‌ ಸಮರ, ನಿರೀಕ್ಷೆ, ಕಾತರ, ಖುಷಿ

By Staff
|

ಭಾರತ-ಪಾಕ್‌ ಕ್ರಿಕೆಟ್‌ ಸಮರ, ನಿರೀಕ್ಷೆ, ಕಾತರ, ಖುಷಿ

ಮಾರ್ಚಿ 24ರಿಂದ ಬೆಂಗಳೂರಿನಲ್ಲಿ ಅಂತಿಮ ಟೆಸ್ಟ್‌ ಪಂದ್ಯಾವಳಿ

ತಿರುವನಂತಪುರ : ಕ್ರಿಕೆಟ್‌ ಪ್ರೇಮಿಗಳ ಕನಸು ಕಡೆಗೂ ನನಸಾಗಿದೆ. ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಹಣಾಹಣಿಗೆ ಲಗ್ನ ಕೂಡಿ ಬಂದಿದೆ. ಮಾರ್ಚಿ 24ರಿಂದ ಅಂತಿಮ ಟೆಸ್ಟ್‌ ಬೆಂಗಳೂರಿನಲ್ಲಿ ನಡೆಯಲಿದೆ.

ಮೂರು ಟೆಸ್ಟ್‌ ಮತ್ತು ಆರು ಏಕದಿನ ಪಂದ್ಯಗಳನ್ನೊಳಗೊಂಡ ಐವತ್ತು ದಿನಗಳ ಪ್ರವಾಸಕ್ಕಾಗಿ ಪಾಕಿಸ್ತಾನ ಕ್ರಿಕೆಟ್‌ತಂಡವು ಫೆ. 28ರಂದು ಭಾರತಕ್ಕೆ ಆಗಮಿಸಲಿದೆ. ಆರು ವರ್ಷಗಳ ಸುದೀರ್ಘ ಅಂತರದ ನಂತರ ಪಾಕಿಸ್ತಾನ ತಂಡ ಪೂರ್ಣಪ್ರಮಾಣದ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುತ್ತಿದೆ.

ಮಾ.3ರಂದು ಧರ್ಮಶಾಲಾದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧ ನಡೆಯಲಿರುವ ತ್ರಿದಿನ ಪಂದ್ಯದಲ್ಲಿ ಆಡುವ ಮೂಲಕ ಪಾಕಿಸ್ತಾನ ತಂಡದ ಪ್ರವಾಸ ಆರಂಭಗೊಳ್ಳಲಿದೆ. ಉಭಯ ರಾಷ್ಟ್ರಗಳ ನಡುವೆ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಗಳ ಫಲಶ್ರುತಿಯಾಗಿ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ.

ಭಾರತ-ಪಾಕ್‌ ನಡುವಿನ ಹಣಾಹಣಿಯ ಕಾರ್ಯಸೂಚಿ :

ಫೆ. 28ರಂದು ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲಿದೆ.

ಮಾ. 3-5ರ ತನಕ ಧರ್ಮಶಾಲಾದಲ್ಲಿ ತ್ರಿದಿನ ಪಂದ್ಯ

ಮಾ. 8-12ರವರೆಗೆ ಮೊಹಾಲಿಯಲ್ಲಿ ಪ್ರಥಮ ಟೆಸ್ಟ್‌

ಮಾ. 16-20ರವರೆಗೆ ಕೋಲ್ಕತದಲ್ಲಿ ದ್ವಿತೀಯ ಟೆಸ್ಟ್‌

ಮಾ. 24-28ರವರೆಗೆ ಬೆಂಗಳೂರುನಲ್ಲಿ ತೃತೀಯ ಟೆಸ್ಟ್‌

ಎ. 2ರಂದು ಕೊಚ್ಚಿಯಲ್ಲಿ ಪ್ರಥಮ ಏಕದಿನ ಪಂದ್ಯ

ಎ. 5ರಂದು ವಿಶಾಖಪಟ್ಟಣದಲ್ಲಿ ದ್ವಿತೀಯ ಏಕದಿನ ಪಂದ್ಯ

ಎ. 9ರಂದು ತೃತೀಯ ಏಕದಿನ ಪಂದ್ಯ ಜಮ್ಶೆಡ್‌ಪುರದಲ್ಲಿ ನಡೆಯಲಿದೆ

ಎ. 12ರಂದು ನಾಲ್ಕನೇ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ

ಎ. 15ರಂದು ಕಾನ್ಪುರದಲ್ಲಿ ಐದನೇ ಏಕದಿನ ಪಂದ್ಯ

ಎ. 17ರಂದು ನವದೆಹಲಿಯಲಿ ಆರನೇ ಏಕದಿನ ಪಂದ್ಯ

ಎ. 18ರಂದು ಪಾಕಿಸ್ತಾನ ತಂಡ ತವರಿಗೆ ನಿರ್ಗಮನ

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more