ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾನು ಇದ್ದೀನಪ್ಪ’ ಎದ್ದು ನಿಂತಿದ್ದಾರೆ ಬಿ.ಎ.ಇದಿನಬ್ಬ

By Staff
|
Google Oneindia Kannada News

‘ನಾನು ಇದ್ದೀನಪ್ಪ’ ಎದ್ದು ನಿಂತಿದ್ದಾರೆ ಬಿ.ಎ.ಇದಿನಬ್ಬ
23ಸಾವಿರ ಐಟಿ ಉದ್ಯೋಗಿಗಳಲ್ಲಿ 1500ರ ಗಡಿದಾಟದ ಕನ್ನಡಿಗರು -ವಾಟಾಳ್‌

ಬೆಂಗಳೂರು : ಚಂದ್ರಶೇಖರ ಪಾಟೀಲ ಮತ್ತು ಬರಗೂರು ರಾಮಚಂದ್ರಪ್ಪನವರ ಅಧಿಕಾರವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನೂ ಮಾಡದಿದ್ದರೂ, ಆಗಾಗ ಕನ್ನಡದ ಘರ್ಷಣೆಯನ್ನು ಮಾಡುತ್ತಿತ್ತು. ಅದೀಗ ದನಿ ಕಳೆದುಕೊಂಡಿದೆ ಎನ್ನುವ ಆರೋಪಗಳ ಬೆನ್ನಲ್ಲಿ ಪ್ರಾಧಿಕಾರದ ಅಧ್ಯಕ್ಷ ಬಿ.ಎ.ಇದಿನಬ್ಬ ಎದ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಉದ್ಯಮಗಳು ಕನ್ನಡಿಗರನ್ನು ನಿರ್ಲಕ್ಷ್ಯಮಾಡುತ್ತಿರುವ ಬಗ್ಗೆ ಕೆಂಡಕಾರಿದ್ದಾರೆ.

ಮೊದಲ ಹಂತದಲ್ಲಿ ವಿಧಾನಸೌಧದ ನಮ್ಮ ಕಚೇರಿಗೆ ಇನ್ಫೋಸಿಸ್‌ ನಾರಾಯಣ ಮೂರ್ತಿ ಸೇರಿದಂತೆ ಐಟಿ ರಂಗದ ಗಣ್ಯರನ್ನು ಆಹ್ವಾನಿಸಿ ಸಭೆ ನಡೆಸಲಾಗುವುದು. ಐಟಿ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗಗಳನ್ನು ಮೀಸಲಿಡುವಂತೆ ಸೂಚಿಸಿ, ನೋಟೀಸ್‌ ಜಾರಿ ಮಾಡುವುದಾಗಿ ಇದಿನಪ್ಪ ತಿಳಿಸಿದರು.

ಇದಿನಪ್ಪ ಅವರಿಗೆ ಬೆನ್ನುಕೊಟ್ಟು ನಿಂತಿರುವ ಕನ್ನಡ ಚಳವಳಿಯ ವಾಟಾಳ್‌ ನಾಗರಾಜ್‌ ಮಾತನಾಡಿ, ಬೆಂಗಳೂರಿನ ಐಟಿ ಕಂಪನಿಗಳ 23ಸಾವಿರ ಉನ್ನತ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ 1500ರ ಗಡಿದಾಟುವುದಿಲ್ಲ. ಅಲ್ಲಿ ಕಸ ಗುಡಿಸುವ ಕೆಲಸ ಸಹ ಕನ್ನಡಿಗರಿಗೆ ಸಿಕ್ಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಾಣಗೆರೆ ವೆಂಕಟರಾಮಯ್ಯ, ಪ್ರಸನ್ನಕುಮಾರ್‌, ಸಿ.ವಿ.ಶಿವಶಂಕರ್‌ ಮತ್ತಿತರರು ಹಾಜರಿದ್ದರು.

ಜೀವ ಕೊಡಿ : ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಸತ್ತ ಹಾವೆಂದೇ ಗುರ್ತಿಸಲ್ಪಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾಯಕಲ್ಪ ನೀಡಬೇಕೆಂಬ ಒತ್ತಾಯ ಹಿಂದಿನಿಂದಲೂ ಕೇಳಿ ಬರುತ್ತಿದೆ.

ವಯಸ್ಸಾಗಿದ್ದರೂ ರಾಜ್ಯದ 18ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದ್ದರೂ, ಆಡಳಿತ ಯಂತ್ರ ಗಮನಹರಿಸಿಲ್ಲ ಎಂಬ ವಿಷಾದ ಇದಿನಪ್ಪ ಅವರಲ್ಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X