• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ವಾಕ್‌ ಸಮರ

By Staff
|

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ವಾಕ್‌ ಸಮರ

ಗೌಡರು ತಮ್ಮ ಆಟ ನಿಲ್ಲಿಸಲಿ -ಜನಾರ್ದನ ಪೂಜಾರಿ

ಬೆಂಗಳೂರು : ರಾಜ್ಯದ ಸಮ್ಮಿಶ್ರ ಸರಕಾರದ ಎರಡು ದಿಕ್ಕುಗಳಲ್ಲೂ ವ್ಯತಿರಿಕ್ತ ಹೇಳಿಕೆಗಳ ಸಮರ ಮತ್ತೆ ಆರಂಭಗೊಂಡಿದೆ. ಪೂಜಾರಿ ಮತ್ತು ದೇವೇಗೌಡರ ನಡುವಿನ ವಾಕ್‌ಸಮರ ಬಿರುಸಾಗುತ್ತಿದೆ.

ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡರು ಮುಂದಿನ ಚುನಾವಣೆಗೆ ಸಜ್ಜಾಗಿ ಎಂದ ಬೆನ್ನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ, ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವನ್ನು ಸಿಡಿಸಿ ಅದರ ಪ್ರಯೋಜನ ಪಡೆಯಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಹೈಕಮಾಂಡ್‌ ಅಥವಾ ಸೋನಿಯಾ ಗಾಂಧಿ ಬಗ್ಗೆ ಚಕಾರ ವೆತ್ತಿದರೆ ತಕ್ಕ ಪಾಠ ಕಲಿಸುತ್ತೆವೆ. ಬೇಕಿದ್ದರೆ ಜೆಡಿಎಸ್‌ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯಲಿ ಎಂದು ಸವಾಲು ಹಾಕಿದರು.

ಧರ್ಮಸಿಂಗ್‌ರ ಸಹನೆ ದೊಡ್ಡದು. ನಾನು ಮುಖ್ಯಮಂತ್ರಿಯಾಗಿದ್ದರೆ ದೇವೇಗೌಡರ ಕುಟುಂಬದ ಕಾಟ ತಾಳಲಾರದೇ ಸರಕಾರದಿಂದ ಹೊರಬರುತ್ತಿದ್ದೆ. ಮುಖ್ಯಮಂತ್ರಿಯಾಬ್ಬರನ್ನು ಏಕವಚನದಿಂದ ಸಂಬೋಧಿಸುವುದು ಪ್ರಧಾನಿಯಾಗಿದ್ದವರಿಗೆ ಘನತೆ ತರುವುದಿಲ್ಲ. ಇನ್ನಾದರೂ ನಿಮ್ಮ ಆಟ ನಿಲ್ಲಿಸಿ ಎಂದು ಜನಾರ್ದನ ಪೂಜಾರಿ ಗೌಡರನ್ನು ಎಚ್ಚರಿಸಿದ್ದಾರೆ.

ಜೆಡಿಎಸ್‌ ಪಾಳಯ : ಚುನಾವಣೆಗೆ ಸಜ್ಜಾಗಿ ಎಂಬ ಕರೆಯನ್ನು ಯಾವ ಮಾನದಂಡದಲ್ಲಿ ಗೌಡರು ನೀಡಿದ್ದಾರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಬಲ ವಾಪಸ್‌ ಪಡೆಯಲು ಚಿಂತನೆಗಳು ನಡೆದಿವೆ ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹೇಳುತ್ತಿದ್ದಾರೆ. ತಮ್ಮ ಮಾತಿನ ಧಾಟಿ ಬದಲಿಸಿರುವ ದೇವೇಗೌಡರು, ಸಮ್ಮಿಶ್ರ ಸರಕಾರ ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಲಿದೆ ಎಂದು ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಪ್ರತಿಭಟನೆ : ದೇವೇಗೌಡರ ಹೇಳಿಕೆಗಳ ಬೆನ್ನಲ್ಲಿ ರಾಜ್ಯದ ಕೆಲವೆಡೆ, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more