ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಏರೋ ಇಂಡಿಯಾ-2005’ ವೈಮಾನಿಕ ಸಂತೆಗೆ ತೆರೆ

By Staff
|
Google Oneindia Kannada News

‘ಏರೋ ಇಂಡಿಯಾ-2005’ ವೈಮಾನಿಕ ಸಂತೆಗೆ ತೆರೆ
ಮನುಕುಲದ ಅತ್ಯಾಧುನಿಕ ಅಸ್ತ್ರಗಳನ್ನು ಕಂಡ ಜನರಲ್ಲಿ ಪುಳಕವೋ ಪುಳಕ !

ಬೆಂಗಳೂರು : ಭಾರತದ ವೈಮಾನಿಕ ಶಕ್ತಿ ಸಾಮರ್ಥ್ಯ ಹಾಗೂ ಹಿರಿಮೆ-ಗರಿಮೆಗಳನ್ನು ಜಗತ್ತಿಗೆ ಸಾರಿದ ಏರೋ ಇಂಡಿಯಾ-2005ಕ್ಕೆ ಭಾನುವಾರ(ಫೆ.13)ಸಂಜೆ ತೆರೆಬಿದ್ದಿದೆ.

ಯಲಹಂಕದ ವಾಯುಪಡೆ ಮೈದಾನದಲ್ಲಿ ಕಳೆದ ಐದು ದಿನಗಳ ಕಾಲ ನಡೆದ ವೈಮಾನಿಕ ಸಂತೆಯಲ್ಲಿ ಲಕ್ಷಾಂತರ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರತಿದಿನ ವಿಮಾನಗಳ ಹಾರಾಟದ ಚೆಲುವನ್ನು ವೀಕ್ಷಿಸಲು ನಾಗರೀಕರು ಮುಗಿಬೀಳುತ್ತಿದ್ದರು.

ರಕ್ಷಣಾ ಇಲಾಖೆ ಆಯೋಜಿಸಿದ್ದ ಐದನೇ ಜಾಗತಿಕ ಮಟ್ಟದ ಈ ಏರ್‌ಷೋನಲ್ಲಿ 31ದೇಶಗಳ 374ಕಂಪನಿಗಳು ಪಾಲ್ಗೊಂಡಿದ್ದವು. ಸುಮಾರು 60 ವಿಮಾನಗಳ ವರ್ಣರಂಜಿತ ಹಾರಾಟ ಕಂಡ ಜನತೆ ಪುಳಕಗೊಂಡಿದ್ದಾರೆ. ಅಲ್ಲದೇ ಏರ್‌ಷೋ ವಾಣಿಜ್ಯ ಉದ್ದೇಶಕ್ಕೆ ವೇದಿಕೆಯಾಗಿತ್ತು.

ತೇಜಸ್‌, ಧ್ರುವ, ಎಚ್‌ಜೆಟಿ, ಸೂರ್ಯಕಿರಣ್‌, ಬ್ರಿಟೀಷ್‌ ರಾಯಲ್‌ನ ಏರ್‌ಫೋರ್ಸ್‌ಗಳು, ಎಫ್‌-15ಇ, ಪ್ರಾನ್ಸ್‌ನ ಮಿರಾಜ್‌-2000, ಹದಿನೈದು ನಿಮಿಷದಲ್ಲಿ 28ಸಾವಿರ ಅಡಿ ಜಿಗಿಯುವ ಅಮೆರಿಕದ ಸಿ.130ಜೆ, ಸುಕೋಯಿ ಸೇರಿದಂತೆ ವಿವಿಧ ದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಾಣುವ ಅವಕಾಶವನ್ನು ಏರ್‌ಷೋ ಕಲ್ಪಿಸಿತ್ತು.

ಏರೋ ಇಂಡಿಯಾ-2005ರ ಪ್ರದರ್ಶನದಿಂದ 20ಕೋಟಿ ರೂ.ಲಾಭ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X