ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮನಮೋಹನ್‌ ಭೇಟಿ: ಹತ್ತಾರು ನಿರೀಕ್ಷೆ

By Staff
|
Google Oneindia Kannada News

ಪ್ರಧಾನಿ ಮನಮೋಹನ್‌ ಭೇಟಿ: ಹತ್ತಾರು ನಿರೀಕ್ಷೆ
ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ವಿಶೇಷ ಒಲವು, ಸಿಕ್ಕಬಹುದೇ ಏನಾದರೂ ವರ?

ಬೆಂಗಳೂರು : ಕರ್ನಾಟಕದ ಅಭಿವೃದ್ಧಿ ಬಗೆಗೆ ಇಪ್ಪತ್ತೆೈದು ವರ್ಷಗಳ ನಂತರ ರಾಜಧಾನಿಯ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ, ರಾಷ್ಟ್ರದ ಪ್ರಧಾನ ಮಂತ್ರಿಗಳು ಶುಕ್ರವಾರ ಚರ್ಚೆ ನಡೆಸಲು ಮುಂದಾಗಿದ್ದಾರೆ.

ಪ್ರಧಾನಿ ಮನಮೋಹನ್‌ ಸಿಂಗ್‌ರ ರಾಜ್ಯದ ಭೇಟಿ ಈ ನಿಟ್ಟಿನಲ್ಲಿ ವಿಶೇಷವೇ ಸರಿ. ಹಿಂದೆ ಗುಂಡೂರಾವ್‌ ಮತ್ತು ಇಂದಿರಾಗಾಂಧಿ ಚರ್ಚಿಸಿದ ನೆನಪು ಅನೇಕರಲ್ಲಿದೆ. ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಶುಕ್ರವಾರ(ಫೆ.11) ಮಧ್ಯಾಹ್ನ 3.30ಕ್ಕೆ ಆಗಮಿಸುತ್ತಿರುವ ಮನಮೋಹನ್‌ ಸಿಂಗ್‌, ವಿಧಾನಸೌಧದಲ್ಲಿ ಉನ್ನತಮಟ್ಟದ ಸಭೆ ನಡೆಸುವರು.

ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ, ಮೆಟ್ರೊ ರೈಲು ಸೇರಿದಂತೆ ವಿವಿಧ ಯೋಜನೆಗಳು ಚರ್ಚೆಗೆ ಒಳಪಡಲಿವೆ.

ನಮ್ಮವರ ಮನವಿ : ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆ ನೀಡುವುದು, ಹೈದ್ರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಪ್ರಧಾನಿಗೆ ಸಲ್ಲಿಸುವರು.

ರಾಜ್ಯಪಾಲರಾದ ಚತುರ್ವೇದಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರೊಂದಿಗೆ ಮನಮೋಹನ್‌ಸಿಂಗ್‌ ಪ್ರತ್ಯೇಕ ಮಾತುಕತೆ ನಡೆಸುವರು. ಪ್ರಧಾನಿ ಭೇಟಿಯ ಹಿನ್ನೆಲೆ ರಾಜ್ಯದ ಆಡಳಿತದ ಮನೆ ವಿಧಾನಸೌಧ ಪೋಲೀಸರಿಂದ ತುಂಬಿ ತುಳುಕುತ್ತಿದೆ.

ಮೈಸೂರು ಭೇಟಿ : ಶನಿವಾರ ಮೈಸೂರಿಗೆ ತೆರಳುವ ಪ್ರಧಾನಿ ಮನಮೋಹನ್‌ ಸಿಂಗ್‌, ಸುತ್ತೂರು ಮಠದ ದಾಸೋಹ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಇನ್‌ಫೋಸಿಸ್‌ ತರಭೇತಿ ಕೇಂದ್ರವನ್ನು ಉದ್ಘಾಟಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X