ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆತ್ತರ ನಂತರ ಸಂಗೀತದ ಹೊಳೆ ; ಚಿಕ್ಕಮಗಳೂರಿನಲ್ಲಿ ‘ಗೀತೋತ್ಸವ’

By Staff
|
Google Oneindia Kannada News

ನೆತ್ತರ ನಂತರ ಸಂಗೀತದ ಹೊಳೆ ; ಚಿಕ್ಕಮಗಳೂರಿನಲ್ಲಿ ‘ಗೀತೋತ್ಸವ’
ಎಚ್‌.ಆರ್‌. ಲೀಲಾವತಿ ಅಧ್ಯಕ್ಷತೆಯಲ್ಲಿ ಎರಡು ದಿನದ ಸಮ್ಮೇಳನ

ಬೆಂಗಳೂರು : ನಕ್ಸಲರ ನೆತ್ತರ ತೇವವಿನ್ನೂ ಆರದ ಪಶ್ಚಿಮಘಟ್ಟಗಳಲ್ಲಿ ಪೊಲೀಸರ ಬೂಟಿನ ಶಬ್ದ ಕೇಳುತ್ತಿರುವ ಹೊತ್ತಿನಲ್ಲೇ ಸಂಗೀತದ ಆಲಾಪಕ್ಕೆ ಕಾಫಿಯ ತವರು ಚಿಕ್ಕಮಗಳೂರು ಸಜ್ಜಾಗುತ್ತಿದೆ.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಮೂರನೇ ಸಮ್ಮೇಳನ ಗೀತೋತ್ಸವ-2005 ಫೆಬ್ರವರಿ 12 ಹಾಗೂ 13ರಂದು ಚಿಕ್ಕಮಗಳೂರಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದ್ದಾರೆ.

ಮಾಜಿ ಸಚಿವ ಎಚ್‌.ಜಿ ಗೋವಿಂದೇಗೌಡ ಸಮ್ಮೇಳನವನ್ನು ಉದ್ಘಾಟಿಸುವರು. ಜನಪ್ರಿಯ ಸುಗಮ ಸಂಗೀತ ಗಾಯಕಿ ಎಚ್‌.ಆರ್‌. ಲೀಲಾವತಿ ಸಮ್ಮೇಳನದ ಅಧ್ಯಕ್ಷತೆ ವಹಿಸವರು. ಹಿರಿಯ ಕವಿ ಡಾ. ಜಿ.ಎಸ್‌. ಶಿವರುದ್ರಪ್ಪ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಮತ್ತಿತರರು ಸಮ್ಮೇಳನದಲ್ಲಿ ಭಾಗವಹಿಸುವರು.

ಯಥಾಪ್ರಕಾರ ಸಿ. ಅಶ್ವಥ್‌, ಯಶವಂತ ಹಳಿಬಂಡಿ ಮುಂತಾದ ಹಿರಿಯರೊಂದಿಗೆ ಕಿರಿಯರೂ ಸಮ್ಮೇಳನದಲ್ಲಿ ಹಾಡಲಿದ್ದಾರೆ. ಜಿಲ್ಲೆಯ ಆಯ್ದ 120 ಯುವ ಗಾಯಕರು ಸಮ್ಮೇಳನದಲ್ಲಿ ಹಾಡಿನ ಹೊಳೆ ಹರಿಸುವರು.

ವಾರ್ತಾ ಸಚಿವ ಬಿ. ಶಿವರಾಂ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು , ಕಸಾಪ ಅಧ್ಯಕ್ಷ ಚಂಪಾ, ಸಂಗೀತ ವಿದುಷಿ ಶ್ಯಾಮಲಾ ಭಾವೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X