ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನನ್ನುನೋಡಿ 24 ವರ್ಷವಾಗಿತ್ತು -ಪ್ರೇಮ್‌ತಾಯಿಯ ಅಳಲು

By Staff
|
Google Oneindia Kannada News

ಮಗನನ್ನುನೋಡಿ 24 ವರ್ಷವಾಗಿತ್ತು -ಪ್ರೇಮ್‌ತಾಯಿಯ ಅಳಲು
ಪೊಲೀಸರ ಗುಂಡಿಗೆ ಬಲಿಯಾದ ಮಗನ ನೋಡಲೊಪ್ಪದ ತಾಯಿಜೀವ

ಮೈಸೂರು : ನನ್ನ ಮಗನ ಬಗ್ಗೆ ಹೆಮ್ಮೆಯೆನ್ನಿಸುತ್ತದೆ. ಆತನಿಗೆ ಬಡವರನ್ನು ಕಂಡರೆ ಕಳಕಳಿಯಿತ್ತು, ಅಪಾರ ಕರುಣೆಯಿತ್ತು . ಆತ ಜೀವನದಲ್ಲಿ ಯಾವುದೇ ತಪ್ಪು ನಿರ್ಣಯಗಳನ್ನು ಕೈಗೊಳ್ಳಲಿಲ್ಲ .

ಹಾಗೆನ್ನುವಾಗ 74 ವರ್ಷದ ರಾಜಲಕ್ಷ್ಮಿ ಸುಂದರರಾಜನ್‌ ಅವರ ಕಣ್ಣುಗಳು ಕೊಳಗಳಾಗಿದ್ದವು. ಆಕೆ ಫೆಬ್ರವರಿ 6ರಂದು ಕುದುರೆಮುಖ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್‌ ಮುಖಂಡ ಪ್ರೇಮ್‌ ಅಲಿಯಾಸ್‌ ಎಸ್‌. ಸಾಕೇತ್‌ ರಾಜನ್‌ ಅವರ ತಾಯಿ.

ಮೈಸೂರಿನ ವಿವಿ ಪುರಂನಲ್ಲಿನ ನಿಖಿತ ಅಪಾರ್ಟ್‌ಮೆಂಟ್ಸ್‌ನಲ್ಲಿ ರಾಜಲಕ್ಷ್ಮಿ ಅವರ ವಾಸ. ಮೈಸೂರಿನಲ್ಲಿ ಅವರದೊಂದು ಪೆಟ್ರೋಲ್‌ ಬಂಕಿದೆ. ಪತಿ ಸುಂದರರಾಜನ್‌ ಸೇನೆಯಲ್ಲಿದ್ದವರು, ಈಗ ಬದುಕಿಲ್ಲ . ಇನ್ನೊಬ್ಬ ಮಗನೂ ಉಳಿದಿಲ್ಲ . ಈಗ ಉಳಿದೊಬ್ಬ ಮಗನನ್ನೂ ಕಳೆದುಕೊಂಡ ದೌರ್ಭಾಗ್ಯ ರಾಜಲಕ್ಷ್ಮಿ ಅವರದು.

ಮಗ ಪ್ರೇಮ್‌ ಅವರ ಮೃತದೇಹವನ್ನು ನೋಡಲು ರಾಜಲಕ್ಷ್ಮಿಯವರಿಗೆ ಮನಸ್ಸಿಲ್ಲ . ನಾನು ನನ್ನ ಮಗನ ಶವವನ್ನು ನೋಡಲು ಬಯಸುವುದಿಲ್ಲ . ಬುಲೆಟ್‌ಗಳು ಹೊಕ್ಕ ಮಗನ ದೇಹವನ್ನು ನಾನು ಹೇಗಾದರೂ ನೋಡಲಿ? ಎಂದು ಆ ತಾಯಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರನ್ನು ಪ್ರಶ್ನಿಸಿದರು.

ತಮ್ಮ ಮಗನ ನಕ್ಸಲ್‌ ಚಟುವಟಿಕೆಗಳು ಪತ್ರಿಕೆಗಳ ಮೂಲಕವೇ ತಿಳಿಯುತ್ತಿತ್ತು . ಆತ ನಮ್ಮೊಂದಿಗೆ ಸಂಪರ್ಕ ಕಳಕೊಂಡಿದ್ದ . ಆತನನ್ನು ನೋಡಿ 24 ವರ್ಷಗಳಾದವು ಎನ್ನುವಾಗ ರಾಜಲಕ್ಷ್ಮಿ ಅವರ ಗಂಟಲು ಕಟ್ಟಿತ್ತು .

ಪುತ್ರ ಶೋಕಂ ನಿರಂತರಂ.....

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X