ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಾವು ನ್ಯಾಯವೇ? ಪುಟ್ಟ ಬಾಲಕನ ಜೀವ ನುಂಗಿತು ವಿದ್ಯುತ್‌ ಕಂಬ

By Staff
|
Google Oneindia Kannada News

ಈ ಸಾವು ನ್ಯಾಯವೇ? ಪುಟ್ಟ ಬಾಲಕನ ಜೀವ ನುಂಗಿತು ವಿದ್ಯುತ್‌ ಕಂಬ
ಬೆಸ್ಕಾಂ ನಿರ್ಲಕ್ಷ್ಯಕ್ಕೆ ಶಾಲಾ ಬಾಲಕನೊರ್ವನ ಬಲಿ, ಸಾರ್ವಜನಿಕರಿಂದ ರಸ್ತೆ ತಡೆ

ಬೆಂಗಳೂರು : ಯಾರದೋ ನಿರ್ಲಕ್ಷ ್ಯಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ವರದಿಯಾಗಿದೆ. ಊಟದ ವಿರಾಮದ ವೇಳೆ ಶಾಲೆಯಿಂದ ಮನೆಯತ್ತ ಹೊರಟಿದ್ದ ಆರು ವರ್ಷದ ಪುಟ್ಟ ಬಾಲಕ ವಾಸು, ಮನೆ ಸೇರಲಿಲ್ಲ. ಮತ್ತೆ ಶಾಲೆಗೂ ಮರಳಲಿಲ್ಲ. ವಿದ್ಯುತ್‌ ಕಂಬವೊಂದು ಆತನ ಮೇಲೆ ಬಿದ್ದ ಕಾರಣ ವಾಸು ಸಾವಿನ ಮನೆಗೆ ಪಯಣಿಸಿದ್ದಾನೆ.

ನಗರದ ಕೆ.ಆರ್‌.ಪುರದ 11ನೇ ಕ್ರಾಸ್‌ನಲ್ಲಿ ಸೋಮವಾರ(ಫೆ.7) ಈ ದುರಂತ ಸಂಭವಿಸಿದೆ. ಇಲ್ಲಿನ ಶಿಥಿಲವಾಗಿದ್ದ ವಿದ್ಯುತ್‌ ಕಂಬವನ್ನು ಬದಲಿಸುವಂತೆ ಬಹುದಿನಗಳಿಂದಲೂ ನಾಗರಿಕರು ಒತ್ತಾಯಿಸುತ್ತಿದ್ದರು. ಅಂದು ಕಂಬವನ್ನು ಬದಲಿಸುವ ಕಾರ್ಯ ನಡೆಯುತ್ತಿತ್ತು. ಕಂಬದ ಮೇಲೆ ಹತ್ತಿದ ಕೆಲಸಗಾರನೊಬ್ಬ ತಂತಿಗಳನ್ನು ತೆಗೆಯುತ್ತಿದ್ದ. ಅದೇ ಸಂದರ್ಭದಲ್ಲಿ ಶಾಲೆಯಿಂದ ತನ್ನ ಗೆಳೆಯರೊಂದಿಗೆ ವಾಸು ರಸ್ತೆಯಲ್ಲಿ ನಡೆದು ಬರುತ್ತಿದ್ದ. ಕಂಬ ಹತ್ತಿದ್ದ ನೌಕರನ ಭಾರದಿಂದ ಕಂಬ ವಾಸು ಮೇಲೆ ಬಿದ್ದಿದೆ. ಪೋಲೀಸರ ಪ್ರಕಾರ ವಾಸು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಉದ್ರಿಕ್ತ ಜನರು ಈ ಸಂದರ್ಭದಲ್ಲಿ ರಸ್ತೆ ತಡೆ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಗುವಿನ ಪ್ರಾಣಕ್ಕಿಂತಲೂ ಜನರಿಗೆ ಪ್ರತಿಭಟನೆಯೇ ಮುಖ್ಯವಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರೆ ವಾಸು ಬದುಕುವ ಸಾಧ್ಯತೆಗಳಿದ್ದವು ಎನ್ನಲಾಗಿದೆ.

ಬೆಸ್ಕಾಂ ನಿರ್ಲಕ್ಷ್ಯದ ಪ್ರಕರಣಗಳು ಒಂದೆರಡಲ್ಲ. ಇಂದಿರಾನಗರದ ಬಾಲಕ ಅನೀಶ್‌ ಹಾಗೂ ಪೀಣ್ಯದಲ್ಲಿ ಮತ್ತೊಬ್ಬ ಬಾಲಕ ವಿದ್ಯುತ್‌ ತಂತಿ ತುಳಿದು ಸಾವನ್ನಪ್ಪಿದ ಘಟನೆಗಳು ಹಸಿಯಾಗಿರುವಾಗಲೇ ವಾಸು ಮೃತಪಟ್ಟಿದ್ದಾನೆ. ಬೇಜವಬ್ದಾರಿ-ನಿರ್ಲಕ್ಷ್ಯತೆಯ ಕಾರಣಗಳು ಏನೇ ಇರಲಿ... ಈ ಸಾವು ನ್ಯಾಯವೇ ? ಎಂಬ ಪ್ರಶ್ನೆ ಎಲ್ಲರದು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X