• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಪುರೋಹಿತಶಾಹಿ ಹುನ್ನಾರಗಳ ವಿರುದ್ಧ ಶೂದ್ರಾಭಿಯಾನ’ ಆರಂಭ

By Staff
|

‘ಪುರೋಹಿತಶಾಹಿ ಹುನ್ನಾರಗಳ ವಿರುದ್ಧ ಶೂದ್ರಾಭಿಯಾನ’ ಆರಂಭ

ವಿಶ್ವೇಶತೀರ್ಥರ ಶಿಕ್ಷಿಸುವಂತೆ ಬಸವರಾಜ ದೇವರ ಒತ್ತಾಯ

ಉಡುಪಿ : ಕನಕಗೋಪುರ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಮಾರು ಪರ್ಯಾಯ ಮಠದ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಧಾರವಾಡದ ರೇವಣ್ಣಸಿದ್ಧೇಶ್ವರ ಮಠದ ಬಸವರಾಜ ದೇವರು ಸ್ವಾಮಿ ಒತ್ತಾಯಿಸಿದ್ದಾರೆ.

ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಶಿಕ್ಷಿಸಬೇಕು ಹಾಗೂ ಅಷ್ಯಮಠಾಧೀಶರನ್ನು ಬದಿಗಿಟ್ಟು ಕೃಷ್ಣಮಠದ ಮುಂಭಾಗದಲ್ಲಿ ಕನಕಗೋಪುರವನ್ನು ಪುನರ್‌ ನಿರ್ಮಿಸಬೇಕು ಎಂದು ಬಸವರಾಜ ದೇವರು ಆಗ್ರಹಿಸಿದರು. ‘ಪುರೋಹಿತಶಾಹಿ ಹುನ್ನಾರಗಳ ವಿರುದ್ಧ ಶೂದ್ರಾಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ (ಫೆ.6ರ ಭಾನುವಾರ) ಸಂದರ್ಭದಲ್ಲಿ ಅಷ್ಠಮಠಗಳ ವಿರುದ್ಧ ಬಸವರಾಜ ದೇವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಮಠಕ್ಕೆ ಆಡಾಳಿತಾಧಿಕಾರಿಯನ್ನು ನೇಮಿಸಲೇಬೇಕು. ಆನಂತರದ ಆಡಳಿತಕ್ಕಾಗಿ ಕುರುಬರು ಹಾಗೂ ಇತರ ದಲಿತ ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಬಸವರಾಜ ದೇವರು ಹೇಳಿದರು.

ಮೇಲ್ವರ್ಗದವರಿಂದ ದಲಿತರು ಹಾಗೂ ಹಿಂದುಳಿದ ವರ್ಗದವರು ತಲ ತಲಾಂತರಗಳಿಂದ ತುಳಿತಕ್ಕೊಳಗಾಗಿದ್ದಾರೆ ಎಂದು ದೂರಿದ ಬಸವರಾಜ ದೇವರು, ಕೃಷ್ಣಮಠಕ್ಕೆ ಆಡಳಿತಾಧಿಕಾರಿ ನೇಮಕವಾಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more