• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ವ್ಯಾಟ್‌’ಗೆ ವಿಧಾನಮಂಡಲದ ಸಮ್ಮತಿ, ಏಪ್ರಿಲ್‌ 1 ರಿಂದ ಅನುಷ್ಠಾನ

By Staff
|

‘ವ್ಯಾಟ್‌’ಗೆ ವಿಧಾನಮಂಡಲದ ಸಮ್ಮತಿ, ಏಪ್ರಿಲ್‌ 1 ರಿಂದ ಅನುಷ್ಠಾನ

ಉತ್ತರ ಪ್ರದೇಶ ಬಿಟ್ಟು ದೇಶದೆಲ್ಲೆಡೆ ಸಮಾನ ಮಾರಾಟ ತೆರಿಗೆ ವ್ಯವಸ್ಥೆ, ಕರ್ನಾಟಕಕ್ಕೆ 1800ಕೋಟಿ ನಷ್ಟ

ಬೆಂಗಳೂರು: ಮಾರಾಟ ತೆರಿಗೆಗೆ ಹೊಸ ರೂಪ ನೀಡಲಿರುವ ವ್ಯಾಟ್‌(ಮೌಲ್ಯವರ್ಧಿತ ತೆರಿಗೆ)ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳು ಅಂಗೀಕರಿಸಿವೆ. 2003ರಲ್ಲಿ ರೂಪುಗೊಂಡ ವ್ಯಾಟ್‌ ಕೆಲವು ತಿದ್ದುಪಡಿಗಳೊಂದಿಗೆ ಏಪ್ರಿಲ್‌1ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.

550ವಸ್ತುಗಳು ವ್ಯಾಟ್‌ ವ್ಯಾಪ್ತಿಗೆ ಬರಲಿವೆ. ಹೊಸ ವ್ಯವಸ್ಥೆಯಿಂದ ಅಕ್ಕಿ, ಇಟ್ಟಿಗೆ, ಅಲ್ಯೂಮಿನಿಯಂ ಪಾತ್ರೆ, ಅಡಕೆ, ಬೀಡಿ ಎಲೆ, ಔಷಧ, ಬ್ರೆಡ್‌, ನೋಟ್‌ ಪುಸ್ತಕ, ಸಿದ್ಧ ಉಡುಪುಗಳು ಸೇರಿದಂತೆ ವಿವಿಧ 270 ವಸ್ತುಗಳ ಮೇಲೆ ಶೇ.4ರಷ್ಟು ತೆರಿಗೆಯನ್ನು ಸರಕಾರ ವಿಧಿಸುತ್ತದೆ.

ಬಿಸ್ಕತ್ತು, ಚಾಕಲೇಟ್‌, ಆಹಾರ ಪದಾರ್ಥ, ಫ್ರೆಂಚ್‌ ಕಾಫಿ, ಪ್ಲಾಸ್ಟಿಕ್‌ ವಸ್ತುಗಳು, ಗ್ರಾನೈಟ್‌, ಎಲೆಕ್ಟ್ರಿಕ್‌ ಉಪಕರಣಗಳ ಮೇಲೆ ಶೇ.12.5ರಷ್ಟು , ಚಿನ್ನ ಮತ್ತು ಬೆಳ್ಳಿಆಭರಣಗಳ ಮೇಲೆ ಶೇ.1ರಷ್ಟು, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಶೇ.20ರಷ್ಟು ತೆರಿಗೆ ವಿಧಿಸಲು ಸರಕಾರ ನಿರ್ಧರಿಸಿದೆ.

ತೆರಿಗೆ ವಿಧಿಸುವುದರ ಜೊತೆಗೆ ರಾಷ್ಟ್ರಧ್ವಜ, ಪ್ಲಾಸ್ಟಿಕ್‌ಬಳೆ, ಕುಂಕುಮ, ಬಿಂದಿ, ಸಿಂಧೂರ, ವಿಭೂತಿ, ಕಬ್ಬು, ವೀಳ್ಯದೆಲೆ, ಇದ್ದಿಲು, ಸೌದೆ ಸೇರಿದಂತೆ 48ವಸ್ತುಗಳಿಗೆ ವ್ಯಾಟ್‌ನಿಂದ ತೆರಿಗೆ ವಿನಾಯಿತಿ ಸಿಗಲಿದೆ.

ಏನಿದು ವ್ಯಾಟ್‌: ವಿವಿಧ ರಾಜ್ಯಗಳ ತೆರಿಗೆ ಪೈಪೋಟಿಗೆ ಕಡಿವಾಣ ಹಾಕುವುದು ಮೌಲ್ಯವರ್ಧಿತ ತೆರಿಗೆ(VATValue Added Tax)ಯ ಮೂಲ ಉದ್ದೇಶ. ಹಳೆಯ ತೆರಿಗೆ ವ್ಯವಸ್ಥೆಯನ್ನು ಕೈಬಿಟ್ಟು, ರಾಷ್ಟ್ರೀಯ ಮಟ್ಟದಲ್ಲಿ ಸಮಾನ ಮಾರಾಟ ತೆರಿಗೆ ವ್ಯಾಟ್‌ನಿಂದ ಜಾರಿಗೆ ಬರಲಿದೆ. ಉತ್ತರ ಪ್ರದೇಶ ಹೊರತು ಪಡಿಸಿ ಎಲ್ಲಾ ರಾಜ್ಯಗಳು ಈ ಕಾಯಿದೆಗೆ ಸಮ್ಮತಿಸಿವೆ.

ವ್ಯಾಟ್‌ ಎಂದರೆ ತೆರಿಗೆ ಹೆಚ್ಚಳ ಎಂದು ಅರ್ಥವಲ್ಲ. ಕೆಲವು ವಸ್ತುಗಳ ಮೇಲಿದ್ದ ಶೇ.25ರ ತೆರಿಗೆ ಏಪ್ರಿಲ್‌ 1ರಿಂದ ಶೇ.4 ಅಥವಾ ಶೇ.8ಕ್ಕೆ ಇಳಿಯುವ ಸಾಧ್ಯತೆಗಳಿವೆ.

ಸರಕಾರಕ್ಕೆ ನಷ್ಟ: ಪಾರದರ್ಶಕವಾಗಿರುವ ವ್ಯಾಟ್‌ ಅನುಷ್ಠಾನದಿಂದ ಕರ್ನಾಟಕಕ್ಕೆ ವಾರ್ಷಿಕ 1800ಕೋಟಿ ರೂ.ನಷ್ಟ ಸಂಭವಿಸಲಿದೆ. ಮೊದಲ ವರ್ಷದ ನಷ್ಟ ತುಂಬಿಕೊಡಲು ಕೇಂದ್ರ ಭರವಸೆ ನೀಡಿದೆ. ಎರಡನೇ ವರ್ಷ ಶೇ.75 ಹಾಗೂ ಮೂರನೇ ವರ್ಷ ಶೇ.50ರಷ್ಟು ಕೇಂದ್ರ ನಷ್ಟವನ್ನು ಭರಿಸಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more