ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್‌ ಸಂಧಾನ ಫಲಪ್ರದ ; ಉಪವಾಸ ಕೈಬಿಟ್ಟ ಸಂಸದ ಯತ್ನಾಳ್‌

By Staff
|
Google Oneindia Kannada News

ಪ್ರಕಾಶ್‌ ಸಂಧಾನ ಫಲಪ್ರದ ; ಉಪವಾಸ ಕೈಬಿಟ್ಟ ಸಂಸದ ಯತ್ನಾಳ್‌
ಬಿಜಾಪುರ ಜಿಲ್ಲೆಯ ರೈತರ ಬೇಡಿಕೆಗಳ ಕುರಿತ ಮಾತುಕತೆಗೆ ಸರ್ಕಾರ ಸಿದ್ಧ

ಆಲಮಟ್ಟಿ : ಬಿಜಾಪುರ ಜಿಲ್ಲೆಗೆ ಸಮಗ್ರ ನೀರಾವರಿ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಸಂಸದ ಬಸವನಗೌಡ ಪಾಟೀಲ್‌ ಯತ್ನಾಳ್‌ ಕೈಬಿಟ್ಟಿದ್ದಾರೆ.

ಬಿಜಾಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸುವ ಕುರಿತ ಮಾತುಕತೆಗಳಿಗೆ ಸರ್ಕಾರ ಮುಕ್ತಮನಸ್ಸಿನಿಂದ ಸಿದ್ಧವಿದೆ ಎಂದು ಕಂದಾಯ ಸಚಿವ ಎಂ.ಪಿ. ಪ್ರಕಾಶ್‌ ನೀಡಿದ ಭರವಸೆಯ ಮೇರೆಗೆ ಸಂಸದ ಯತ್ನಾಳ್‌ ಹಾಗೂ ಇತರ 130 ರೈತರು ತಮ್ಮ ಉಪವಾಸ ಸತ್ಯಾಗ್ರಹವಮನ್ನು ಫೆ. 4ರಂದು ವಾಪಸ್ಸು ಪಡೆದರು. ಇದರೊಂದಿಗೆ ಬಿಜಾಪುರ ಜಿಲ್ಲೆಯಲ್ಲಿ ತಲೆದೋರಿದ್ದ ಬಿಗುವಿನ ಪರಿಸ್ಥಿತಿ ಸದ್ಯಕ್ಕೆ ಶಮನಗೊಂಡಿದೆ.

ಯತ್ನಾಳ್‌ ಅವರೊಂದಿಗೆ ಉಪವಾಸ ಕೂತವರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ಕೆ. ಬೆಳ್ಳುಬ್ಬಿ, ಜೆಡಿಯು ನಾಯಕ ಎಂ.ಎಸ್‌. ರುದ್ರಗೌಡ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಂಗಳಾದೇವಿ ಬಿರಾದಾರ ಸೇರಿದ್ದರು.

ಹೋರಾಟಗಾರರ ಪ್ರಮುಖ ಬೇಡಿಕೆಯಾದ ಬಿ ಸ್ಕೀಮ್‌ ನೀರಿನ ಹಂಚಿಕೆಯ ಕುರಿತು ಕೆಲವು ತಾಂತ್ರಿಕ ತೊಂದರೆಗಳಿವೆ. ಇತರ ಸಂಪನ್ಮೂಲಗಳ ಲಭ್ಯತೆಯನ್ನು ನೋಡಿಕೊಂಡು ರೈತರ ಎಲ್ಲ ಬೇಡಿಕೆಗಳ ಬಗೆಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ರೈತರನ್ನುದ್ದೇಶಿ ಮಾತನಾಡಿದ ಸಚಿವ ಎಂ.ಪಿ.ಪ್ರಕಾಶ್‌ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಿರಾಜುದ್ದೀನ್‌ ಪಟೇಲ್‌ ಅವರು ಪ್ರಕಾಶ್‌ ಜೊತೆಗಿದ್ದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X