ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೊಲೊ ಆಸ್ಪತ್ರೆಯಿಂದ ದೇಶದ ಮೊದಲ ದ್ವಿಚಕ್ರ ಆ್ಯಂಬುಲೆನ್ಸ್‌ !

By Staff
|
Google Oneindia Kannada News

ಅಪೊಲೊ ಆಸ್ಪತ್ರೆಯಿಂದ ದೇಶದ ಮೊದಲ ದ್ವಿಚಕ್ರ ಆ್ಯಂಬುಲೆನ್ಸ್‌ !
ಚೆನ್ನೈ, ಕೊಲ್ಕತ್ತಾ , ದೆಹಲಿ, ಹೈದರಾಬಾದ್‌ಗಳಲ್ಲಿ ಸೇವೆ ಆರಂಭ

ಚೆನ್ನೈ : ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ದ್ವಿಚಕ್ರ ಆ್ಯಂಬುಲೆನ್ಸ್‌ಗಳನ್ನು ಅಪೊಲೊ ಆಸ್ಪತ್ರೆ ರಸ್ತೆಗಿಳಿಸಿದೆ.

ಕಿಷ್ಕಿಂಧೆಯಂಥ ರಸ್ತೆಗಳು ಹಾಗೂ ವಾಹನ ಸಂಚಾರದ ಒತ್ತಡ ಅಧಿಕವಾಗಿರುವ ಪ್ರದೇಶಗಳಲ್ಲಿ ನಾಲ್ಕು ಚಕ್ರದ ಸಾಂಪ್ರದಾಯಿಕ ಆ್ಯಂಬುಲೆನ್ಸ್‌ಗಳ ಸಂಚಾರ ಕಠಿಣವಾಗಿದ್ದು , ಇಂಥ ಪ್ರದೇಶಗಳಲ್ಲಿ ಎರಡು ಚಕ್ರದ ಆ್ಯಂಬುಲೆನ್ಸ್‌ಗಳು ರೋಗಿಗಳ ಪಾಲಿಗೆ ವರದಾಯಕವಾಗಿ ಪರಿಣಮಿಸಿವೆ. ಚೆನ್ನೈ, ದೆಹಲಿ, ಕೋಲ್ಕತಾ ಹಾಗೂ ಹೈದರಾಬಾದ್‌ಗಳಲ್ಲಿ ಎರಡು ಚಕ್ರದ ಆ್ಯಂಬುಲೆನ್ಸ್‌ಗಳ ಸೇವೆಯನ್ನು ಅಪೊಲೊ ಆಸ್ಪತ್ರೆ ಫೆ. 5ರ ಶನಿವಾರ ಪ್ರಾರಂಭಿಸಿತು.

ಅಪೊಲೊ ದಿಚಕ್ರ ಆ್ಯಂಬುಲೆನ್ಸ್‌ಗಳ ಚಾಲಕ ಹಾಗೂ ಹಿಂಬದಿಯಲ್ಲಿ ಕೂರುವ ಪಿಲಿಯನ್‌ ರೈಡರ್‌- ಇಬ್ಬರೂ ವೈದ್ಯಕೀಯ ತರಬೇತಿ ಪಡೆದಿದ್ದು , ತುರ್ತು ಸಂದರ್ಭಗಳನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿರುತ್ತಾರೆ. ಹೃದಯಾಘಾತ, ಮೂಳೆ ಮುರಿತ ಮುಂತಾದ ಸಂದರ್ಭಗಳಲ್ಲಿ ಈ ಆ್ಯಂಬುಲೆನ್ಸ್‌ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಪೊಲೊ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಪ್ರತಾಪ್‌ ಸಿ. ರೆಡ್ಡಿ ತಿಳಿಸಿದ್ದಾರೆ.

ರೋಗಿಗಳನ್ನು ಆಘಾತದಿಂದ ಕಾಪಾಡುವ ಸೌಲಭ್ಯವೂ ಈ ಆ್ಯಂಬುಲೆನ್ಸ್‌ಗಳಲ್ಲಿದೆ. ಪ್ಲಾಟಿನಂ ಹತ್ತು ನಿಮಿಷ ಹಾಗೂ ಸುವರ್ಣ ತಾಸುಗಳಲ್ಲಿ ಈ ಆ್ಯಂಬುಲೆನ್ಸ್‌ಗಳು ರೋಗಿಗೆ ವರದಾಯಕವಾಗಿವೆ. ಟ್ರಾಫಿಕ್‌ನ ಒತ್ತಡ ಹೆಚ್ಚಾಗಿರುವ ಹೊತ್ತಿನಲ್ಲಿ ಅಪಘಾತಗಳು ಸಂಭವಿಸಿದಾಗ ಅಲ್ಲಿಗೆ ದ್ವಿಚಕ್ರ ಆ್ಯಂಬುಲೆನ್ಸ್‌ಗಳು ಸುಲಭವಾಗಿ ತಲುಪಲು ಸಾಧ್ಯವಿದೆ ಎಂದು ಡಾ. ರೆಡ್ಡಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X