ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇಕ ರಾಜ್ಯಕ್ಕೆಆಗ್ರಹಿಸಿ ರಾಜಧಾನಿಯಲ್ಲಿ ಕೊಡವರಿಂದ ಪ್ರತಿಭಟನೆ

By Staff
|
Google Oneindia Kannada News

ಪ್ರತ್ಯೇಕ ರಾಜ್ಯಕ್ಕೆಆಗ್ರಹಿಸಿ ರಾಜಧಾನಿಯಲ್ಲಿ ಕೊಡವರಿಂದ ಪ್ರತಿಭಟನೆ
ಕೊಡಗನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸುವ ಪ್ರಶ್ನೆಯೇ ಇಲ್ಲ -ಎಂ.ಪಿ. ಪ್ರಕಾಶ್‌

ಬೆಂಗಳೂರು: ನಾಗಾಲ್ಯಾಂಡ್‌ ಮಾದರಿಯಲ್ಲಿ ಕೊಡಗಿಗೆ ಸ್ವಯಂ ಅಧಿಕಾರ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್‌ ಕೌನ್ಸಿಲ್‌(ಸಿಎನ್‌ಸಿ) ಕಾರ್ಯಕರ್ತರು ನಗರದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಗುರುವಾರ (ಫೆ.3)ಧರಣಿ ನಡೆಸಿದರು.

ಕೊಡವ ಭಾಷೆಯನ್ನು ಸಂವಿಧಾನದ 8ನೇ ಅನುಚ್ಛೇದದಲ್ಲಿ ಸೇರಿಸುವುದರೊಂದಿಗೆ ಕೊಡಗಿಗೆ, 370ನೇ ವಿಧಿಯನ್ವ ಯ ವಿಶೇಷ ಹಕ್ಕು ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಆ ಮಾತೇ ಇಲ್ಲ : ಕೊಡಗನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸುವ ಪ್ರಶ್ನೆಯೇ ಇಲ್ಲ. ಆದರೆ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯಸರಕಾರ 10ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ವಿಧಾನ ಸಭೆಯಲ್ಲಿ ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಸ್ಪಷ್ಟಪಡಿಸಿದ್ದಾರೆ.

ಕೊಡವ ಸಂಸ್ಕೃತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸರಕಾರ ವಿಶೇಷ ಪ್ಯಾಕೇಜ್‌ ಘೋಷಿಸಿದೆ. ಕೊಡವ ಅಕಾಡೆಮಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಸಚಿವರು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X