ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರ ಒತ್ತಾಯಕ್ಕೆ ಮಣಿದ ಸರ್ಕಾರ ; ಇಪಿಎಫ್‌ ಬಡ್ಡಿದರ ಏರಿಕೆ

By Staff
|
Google Oneindia Kannada News

ನೌಕರರ ಒತ್ತಾಯಕ್ಕೆ ಮಣಿದ ಸರ್ಕಾರ ; ಇಪಿಎಫ್‌ ಬಡ್ಡಿದರ ಏರಿಕೆ
ಪ್ರಧಾನಿ ಜೊತೆ ಮಾತುಕತೆ ನಂತರ ಚಿದಂಬರಂ ಪ್ರಕಟಣೆ

ಬೆಂಗಳೂರು : ದುಡಿಯುವ ವರ್ಗದ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ನೌಕರರ ಭವಿಷ್ಯನಿಧಿ (ಇಪಿಎಫ್‌) ಬಡ್ಡಿದರವನ್ನು 2004-05ನೇ ಸಾಲಿಗೆ ಶೇ.9.5ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಈ ಮೊದಲು ಘೋಷಿಸಿದ್ದ ಮಧ್ಯಂತರ ದರಕ್ಕಿಂತ ಪ್ರಸ್ತುತ ಶೇ.1ರಷ್ಟು ಬಡ್ಡಿದರ ಹೆಚ್ಚಿದ್ದು , ಈ ಅನುಕೂಲವನ್ನು ಸುಮಾರು 4 ಕೋಟಿ ನೌಕರರು ಪಡೆಯಲಿದ್ದಾರೆ. ಇಪಿಎಫ್‌ ಬಡ್ಡಿದರ ಹೆಚ್ಚಿಸುವಂತೆ ನೌಕರರು ಕೇಂದ್ರ ಸರ್ಕಾರವನ್ನು ಬಹುಕಾಲದಿಂದ ಒತ್ತಾಯಿಸುತ್ತಿದ್ದರು.

ಇಪಿಎಫ್‌ ಬಡ್ಡಿದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗೆ ಹಣಕಾಸು ಸಚಿವ ಪಿ.ಚಿದಂಬರಂ ಫೆ.2ರಂದು ಮಾತುಕತೆ ನಡೆಸಿದರು. ಆನಂತರ ಬಡ್ಡಿದರವನ್ನು ಶೇ.9.5ಕ್ಕೆ ಹೆಚ್ಚಿಸಿರುವ ವಿಷಯವನ್ನು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X