ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಹೋರಾಟಕ್ಕೆ ಬೆಂಕಿ ಸ್ಪರ್ಶ : ಬಿಜಾಪುರ ಜಿಲ್ಲೆಯಲ್ಲಿ ಕುದಿಮೌನ

By Super
|
Google Oneindia Kannada News

ಬಿಜಾಪುರ: ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ, ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಧರಣಿ, ಬುಧವಾರ(ಫೆ.3) ಹಿಂಸಾರೂಪಕ್ಕೆ ತಿರುಗಿದೆ. ಕರೆ ನೀಡಲಾಗಿದ್ದ ಜಿಲ್ಲಾ ಬಂದ್‌ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.

ಹಲವಾರು ವಾಹನಗಳ ಮೇಲೆ ಕಲ್ಲುತೂರಾಟ ಸೇರಿದಂತೆ, ಜಿಲ್ಲೆಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಕಾರರ ಆಕ್ರೋಶಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿಗಳ ಕಾರುಗಳು ಜಖಂಗೊಂಡಿವೆ. ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಸ್ತೆತಡೆ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಭಾಗಗಳಲ್ಲಿ ನಡೆಸಲಾಗಿದೆ.

ನೀರಿನ ಹೋರಾಟ ಹಳ್ಳಿಹಳ್ಳಿಗಳಲ್ಲೂ ವ್ಯಾಪಿಸಿದೆ. ಪ್ರತಿ ಹಳ್ಳಿಗಳಲ್ಲೂ ಯುವಕರು, ಹೆಂಗಸರು, ಮಕ್ಕಳು, ವೃದ್ಧರೂ ಸೇರಿದಂತೆ ಪ್ರತಿಯಾಬ್ಬರು ಹೋರಾಟದ ಹಾದಿಯನ್ನು ಹಿಡಿದಿದ್ದಾರೆ. ಬಂದ್‌ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು, ಶಾಲಾ ಕಾಲೇಜು, ನ್ಯಾಯಾಲಯ, ಚಿತ್ರಮಂದಿರ, ಹೋಟೆಲ್‌ಗಳನ್ನು ಮುಚ್ಚಲಾಗಿತ್ತು. ಮುಂಬೈ-ಬಿಜಾಪುರ ರೈಲನ್ನು ಕೆಲವು ಕಾಲ ತಡೆಯಲಾಯಿತು.

ಆಮರಣ ಉಪವಾಸ: ಬಿಜಾಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಬೇಕೆಂದು ಸಂಸದ ಬಸವನಗೌಡ ಯತ್ನಾಳ ನೇತೃತ್ವದಲ್ಲಿ ಇಲ್ಲಿ ಧರಣಿ ನಡೆಯುತ್ತಿದೆ. ಜ.25ರ ಪಾದಯಾತ್ರೆ ಮೂಲಕ ಧರಣಿ ಈ ರೂಪಕ್ಕೆ ತಿರುಗಿದೆ.

ಆಲಮಟ್ಟಿ ಯೋಜನೆಯ ನಂತರ ಅನೇಕ ಹಳ್ಳಿಗಳು ಮುಳುಗಿವೆ. ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸರಕಾರ ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ವಿಧಾನಪರಿಷತ್ತಿನಲ್ಲಿ ಧ್ವನಿಸಿದೆ.

ಕಪಟ ನಾಟಕ: ನೀರಿನ ಹೋರಾಟದ ಧರಣಿಯನ್ನು ಮಾಜಿ ಪ್ರಧಾನಿ ದೇವೇಗೌಡ ಕಪಟ ನಾಟಕ ಎಂದು ಗೇಲಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಇಂತಹ ಬೀದಿ ನಾಟಕದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೃಷ್ಣ ಕೊಳ್ಳದಲ್ಲಿ ಬಚಾವತ್‌ ತೀರ್ಪಿನ ಪ್ರಕಾರ ಬಳಕೆಯಾಗದ ರಾಜ್ಯದ ನೀರಿನ ಪಾಲನ್ನು ಹೊಸ ನ್ಯಾಯಮಂಡಳಿ ವ್ಯಾಪ್ತಿಗೆ ಹಿಂದಿನ ಎನ್‌ಡಿಎ ಸರಕಾರ ಅಳವಡಿಸಿದೆ. ಆ ಮೂಲಕ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಎಲ್ಲ ಕಷ್ಟಕ್ಕೂ ವಾಜಪೇಯಿ ನೀಡಿದ ಕೊಡುಗೆ(?)ಯೇ ಕಾರಣ ಎನ್ನುವುದನ್ನು ಪಕ್ಕಕ್ಕಿಟ್ಟು, ಜನರನ್ನು ವಂಚಿಸಲಾಗುತ್ತಿದೆ ಎಂದರು.
(ಇನ್ಫೋ ವಾರ್ತೆ)

English summary
Four KSRTC buses were set on fire and the police lathi charged and tear gassed violent crowds of farmers and students during the bandh called by the farmers agitating for a comprehensive irrigation policy in Bijapur District on Wednesday(Feb.2).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X