ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ : ನಕ್ಸಲರ ದಾಳಿ, ವ್ಯಾಪಕ ಹಿಂಸೆ, ಮೂವರು ಸಾವು

By Staff
|
Google Oneindia Kannada News

ಬಿಹಾರ ಚುನಾವಣೆ : ನಕ್ಸಲರ ದಾಳಿ, ವ್ಯಾಪಕ ಹಿಂಸೆ, ಮೂವರು ಸಾವು
64 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ

ಪಾಟ್ನ : ಬಿಹಾರದಲ್ಲಿ ಗುರುವಾರ ನಡೆದ ವಿಧಾನಸಭಾ ಚುನಾವಣೆಯ ಪ್ರಥಮ ಹಂತದ ಚುನಾವಣೆಯಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ.

ಬಿಹಾರ ವಿಧಾನಸಭೆಯ 243 ಸ್ಥಾನಗಳ ಪೈಕಿ ಗುರುವಾರ 64ಸ್ಥಾನಗಳಿಗೆ ಚುನಾವಣೆ ನಡೆಯಿತು. ಚುನಾವಣಾ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು , ಗಯಾ ಜಿಲ್ಲೆಯಲ್ಲಿ ನಕ್ಸಲರ ಹಾವಳಿಯಿಂದ ಮೂರುಮಂದಿ ಸಾವನ್ನಪ್ಪಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್‌ಗಳ ದಾಳಿಯಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ನಕ್ಸಲರ ಅಬ್ಬರದಿಂದ ಗಯಾ ಜಿಲ್ಲೆಯ ಕರ್ಮ ಹಳ್ಳಿಯಲ್ಲಿ ಮತದಾನ ನಡೆದಿಲ್ಲ. ಇತರೆಡೆಗಳಲ್ಲಿ ಮತದಾನದ ಪ್ರಮಾಣವೂ ಕುಸಿದಿದೆ.

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಇಂದು ನಡೆದಿರುವ ಚುನಾವಣೆ 826 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ. ಈ 64 ಸ್ಥಾನಗಳ ಪೈಕಿ 2000 ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಆರ್‌ಜೆಡಿ-33, ಬಿಜೆಪಿ-18, ಕಾಂಗ್ರೆಸ್‌-1 ಸ್ಥಾನ ಪಡೆದಿತ್ತು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X