ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ಹ್ಯಾಟ್ರಿಕ್‌: ಕೇಂದ್ರದಿಂದ ಪ್ರತಿಷ್ಠಿತ ಪಿಸಿಆರ್‌ಎ ಪ್ರಶಸ್ತಿ

By Staff
|
Google Oneindia Kannada News

ಕೆಎಸ್‌ಆರ್‌ಟಿಸಿ ಹ್ಯಾಟ್ರಿಕ್‌: ಕೇಂದ್ರದಿಂದ ಪ್ರತಿಷ್ಠಿತ ಪಿಸಿಆರ್‌ಎ ಪ್ರಶಸ್ತಿ
ಲೀಟರ್‌ಗೆ 5.25ಕಿ.ಮೀ ಕ್ರಮಿಸಿದ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಾಧನೆಗೆ ಮೂರನೇ ಸಲ ಮನ್ನಣೆ

ಬೆಂಗಳೂರು : ಅತ್ಯುತ್ತಮ ಇಂಧನ ಉಳಿತಾಯಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಕೇಂದ್ರ ಪೆಟ್ರೋಲಿಯಂ ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆಯ ಪ್ರತಿಷ್ಠಿತ ಗೌರವ ಸಂದಾಯವಾಗಿದೆ.

ಪ್ರಸಕ್ತ ಸಾಲಿನ ರಾಷ್ಟ್ರೀಯ ಇಂಧನ ಉಳಿತಾಯ ಸಾಧನೆ ಪ್ರಶಸ್ತಿಯನ್ನು ಪಡೆದಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಈ ಪ್ರಶಸ್ತಿಯನ್ನು ಮೂರನೇ ಬಾರಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೆಎಸ್‌ಆರ್‌ಟಿಸಿ ಬಸ್ಸುಗಳು 2003-04ನೇ ಸಾಲಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 5.25 ಕಿಲೋಮೀಟರ್‌ಗಳಷ್ಟು ದೂರ ವನ್ನು ಕ್ರಮಿಸಿದ ಸಾಧನೆಗೆ ಈ ಪ್ರಶಸ್ತಿ ಲಭ್ಯವಾಗಿದೆ.

ಸೋಮವಾರ(ಜ.31) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ವಾರ್ತಾ ಸಚಿವ ಜೈಪಾಲ್‌ ರೆಡ್ಡಿ ಅವರಿಂದ ಸಂಸ್ಥೆಯ ವ್ಯವಸ್ಥಾಪಕ ಎಂ.ಆರ್‌. ಶ್ರೀನಿವಾಸಮೂರ್ತಿ ಪ್ರಶಸ್ತಿಯನ್ನು ಸ್ವೀಕರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X