ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಸರ್ಕಾರ ವಜಾ, ತುರ್ತು ಪರಿಸ್ಥಿತಿ ಜಾರಿ -ದೊರೆ ಜ್ಞಾನೇಂದ್ರ

By Staff
|
Google Oneindia Kannada News

ನೇಪಾಳ ಸರ್ಕಾರ ವಜಾ, ತುರ್ತು ಪರಿಸ್ಥಿತಿ ಜಾರಿ -ದೊರೆ ಜ್ಞಾನೇಂದ್ರ
ಮಾವೋ ಉಗ್ರರ ನಿಗ್ರಹಿಸುವಲ್ಲಿ ಪ್ರಧಾನಿ ಶೇರ್‌ ಬಹದ್ದೂರ್‌ ವೈಪಲ್ಯಕ್ಕೆ ಸರಕಾರ ಬಲಿ

ಕಠ್ಮಂಡು : ನೇಪಾಳದ ದೊರೆ ಜ್ಞಾನೇಂದ್ರ ಎಂಟು ತಿಂಗಳ ಹಿಂದಷ್ಟೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಶೇರ್‌ ಬಹದ್ದೂರ್‌ ದೇವ್‌ಪ ಅವರ ಸರಕಾರವನ್ನು ವಜಾಮಾಡಿ, ತುರ್ತುಪರಿಸ್ಥಿತಿಯನ್ನು ಮಂಗಳವಾರ(ಫೆ.1)ಜಾರಿಗೆ ತಂದಿದ್ದಾರೆ. ಮುಂದಿನ ಮೂರುವರ್ಷಗಳ ಕಾಲ ಅಡಳಿತದ ಶಕ್ತಿಯನ್ನು ತಮ್ಮದಾಗಿಸಿಕೊಂಡಿರುವ ಜ್ಞಾನೇಂದ್ರ, ಮಾವೋ ಉಗ್ರವಾದಿಗಳ ವಿರುದ್ಧ ಸಮರ ಸಾರಿದ್ದಾರೆ. ರಾಜಧಾನಿ ನಗರದಲ್ಲಿ ಶಸ್ತ್ರಸಜ್ಜಿತ ವಾಹನಗಳು ಗಸ್ತು ತಿರುಗುತ್ತಿವೆ. ಎಲ್ಲ ಟೆಲಿಫೋನ್‌ ಮತ್ತು ಮೊಬೈಲ್‌ ಸೇವೆಗಳು ಕಡಿತಗೊಂಡಿವೆ.

ಅನಿರೀಕ್ಷಿತ ರಾಜಕೀಯ ಬೆಳವಣಿಕೆ ಬಗೆಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 59ವರ್ಷದ ನೇಪಾಳ ಪ್ರಧಾನಿ ಶೇರ್‌ ಬಹದ್ದೂರ್‌ ಮನೆಯ ಸುತ್ತಲೂ ಸೈನಿಕರು ಜಮಾಯಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಸಿ, ಜನರು ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.

ಟೆಲಿವಿಷನ್‌ ಚಾನಲ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ದೊರೆ ಜ್ಞಾನೇಂದ್ರ, ಮಾವೋ ವಾದದ ಬಂಡುಕೋರರ ನಿಗ್ರಹಿಸುವಲ್ಲಿ ಶೇರ್‌ ಬಹದ್ದೂರ್‌ ಸರಕಾರ ವಿಫಲವಾಗಿದೆ. ಅಲ್ಲದೇ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಲು ಮೂಲಭೂತ ಸಿದ್ಧತೆಗಳ ನಡೆಸಿಲ್ಲ. ಹೀಗಾಗಿ ಸರಕಾರವನ್ನು ವಜಾ ಮಾಡಿರುವುದಾಗಿ ವಿವರಿಸಿದ್ದಾರೆ.

ಕಳೆದ ವರ್ಷ ಪ್ರಧಾನಿಯಾಗಿ ಶೇರ್‌ ಬಹದ್ದೂರ್‌ರನ್ನು ದೊರೆ ಜ್ಞಾನೇಂದ್ರ ನೇಪಾಳದ ಪ್ರಧಾನಿಯಾಗಿ ನೇಮಕಮಾಡಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X