ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾವಣ್ಯ ರಾಮಕೃಷ್ಣರಿಗೆ ‘ಮಿಸ್‌ ಕರಾವಳಿ -2005’ ಸುಂದರಿ ಕಿರೀಟ

By Staff
|
Google Oneindia Kannada News

ಲಾವಣ್ಯ ರಾಮಕೃಷ್ಣರಿಗೆ ‘ಮಿಸ್‌ ಕರಾವಳಿ -2005’ ಸುಂದರಿ ಕಿರೀಟ
ರಂಜಿತಾ ಭಂಡಾರ್‌ಕರ್‌ಗೆ ಲಿಟಲ್‌ ಕರಾವಳಿ-2005 ಪಟ್ಟ

ಹೊನ್ನಾವರ : ಕಾರವಾರದ ಲಾವಣ್ಯ ರಾಮಕೃಷ್ಣ ಮಿಸ್‌ ಕರಾವಳಿ-2005 ಸುಂದರಿಯಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಕ್ರಿಯಾಶೀಲ ಸೇವಾ ಸಂಘ ಇತ್ತೀಚೆಗೆ ಹೊನ್ನಾವರದಲ್ಲಿ ಏರ್ಪಡಿಸಿದ್ದ ಮಿಸ್‌ ಕರಾವಳಿ-2005 ಸ್ಪರ್ಧೆಯಲ್ಲಿ ಲಾವಣ್ಯ ರಾಮಕೃಷ್ಣ ಕಾರವಾರ ಸುಂದರಿ ಪಟ್ಟ ಅಲಂಕರಿಸಿದರು. ಕಳೆದ ವರ್ಷದ ಮಿಸ್‌ ಕರಾವಳಿ ವಿಜೇತೆ ಶಿರಿನ್‌ ಶೇಕ್‌ ಸುಂದರಿ ಕಿರೀಟವನ್ನು ಲಾವಣ್ಯಾಗೆ ತೊಡಿಸಿದರು. ಧಾರವಾಡದ ಕೆಡಿಸಿ ಕಾಲೇಜಿನಲ್ಲಿ ಲಾವಣ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ಮಂಗಳೂರಿನ ಎಂಬಿಎ ವಿದ್ಯಾರ್ಥಿನಿ ಸೀಮಾ ತೆಲ್ವಿ ಹಾಗೂ ಮಂಗಳೂರಿನ ಫ್ಯಾಷನ್‌ ವಿನ್ಯಾಸ ವಿದ್ಯಾರ್ಥಿನಿ ಸ್ವಪ್ನಗಂಧ ನಂತರದ ಸ್ಥಾನ ಪಡೆದರು. ಮಂಗಳೂರಿನವರೇ ಆದ ಚೇತನಾ ಸಮಾಧಾನಕರ ಬಹುಮಾನ ಪಡೆದರು.

ಹೊನ್ನಾವರದ 9ನೇ ತರಗತಿ ವಿದ್ಯಾರ್ಥಿನಿ ರಂಜಿತಾ ಭಂಡಾರ್‌ಕರ್‌ ಲಿಟಲ್‌ ಕರಾವಳಿ-2005 ಕಿರೀಟ ಅಲಂಕರಿಸಿದರೆ, ಕರಿಷ್ಮಾ ಖಾನಾಪುರಿ, ವಾಣಿಶ್ರೀ ನಂತರದ ಸ್ಥಾನಗಳನ್ನು ಪಡೆದರು.

ಕಿರುತೆರೆ ಕಲಾವಿದೆ ಶಶಿರೇಖಾ, ವಕೀಲ ಎನ್‌.ಎಸ್‌.ಭಟ್‌, ಲೇಖಕ ಪಿ.ಎಂ. ಹೊನ್ನಾವರ್‌ ಮತ್ತಿತರರು ಸೌಂದರ್ಯ ಸ್ಪರ್ಧೆ ಕಾಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X