ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ವೇದಿಕೆಯಿಂದ ‘ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ’

By Staff
|
Google Oneindia Kannada News

ರಕ್ಷಣಾ ವೇದಿಕೆಯಿಂದ ‘ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ’
ಜನವನರಿ 28-29 ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ, ಕನ್ನಡ ಡಿಂಡಿಮ.

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಹೋರಾಡುತ್ತಿರುವ ಒಂದು ಪ್ರಾತಿನಿಧಿಕ ಸಂಸ್ಥೆ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಸಿದ್ಧಾಂತವನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಯಂ ಸ್ಫೂರ್ತಿ ಹಾಗೂ ಸಾಹಸಿ ಮನೋಭಾವದ ಕಾರ್ಯಕರ್ತರನ್ನು ಒಳಗೊಂಡಿದೆ. ಸದಾ ಕನ್ನಡ ಚಟುವಟಿಕೆಗಳಲ್ಲಿ ತೊಡಗಿರುವ ರಕ್ಷಣಾ ವೇದಿಕೆಯೀಗ ಜಾಗೃತಿ ಸಮಾವೇಶದ ಹುರುಪಿನಲ್ಲಿದೆ.

ಜನವರಿ 28 ಹಾಗೂ 29 ರಂದು ಕರ್ನಾಟಕ ರಕ್ಷಣಾ ವೇದಿಕೆಯ 4ನೇ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಎಲ್ಲಾ ಪಕ್ಷಗಳ ನಾಯಕರು, ಸಾಹಿತಿಗಳು, ವಿಚಾರವಾದಿಗಳು ಪಕ್ಷ, ಜಾತಿ , ಮತ ಬೆರೆತು ಕನ್ನಡದ ಹೆಸರಿನಲ್ಲಿ ಒಂದು ಸೂರಿನಲ್ಲಿ ಸೇರುತ್ತಿರುವುದು ಈ ಸಮಾವೇಶದ ವಿಶೇಷ.

ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ರಕ್ಷಣಾ ವೇದಿಕೆಯ ಸಮಾವೇಶದ ಉದ್ದೇಶ. ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ಕಾರ್ಯಕರ್ತರು ಸೇರುತ್ತಿದ್ದಾರೆ.

ಸಮಾವೇಶದ ಅಂಗವಾಗಿ ಮಹಾತ್ಮಾ ಗಾಂಧಿ ರಸ್ತೆಯ ಕಿಟೆಲ್‌ ಪ್ರತಿಮೆಯಿಂದ, ಸಮಾವೇಶ ನಡೆಯುವ ಸರ್ಕಾರಿ ಕಲಾ ಕಾಲೇಜು ಆವರಣದ ತನಕ ವೈಭವದ ಕನ್ನಡದ ಸಾಂಸ್ಕೃತಿಕ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಕರ್ನಾಟಕದ ಜಾನಪದ ತಂಡಗಳು, ಸಾಂಸ್ಕೃತಿಕ ತಂಡಗಳು, ಸಾವಿರಾರು ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಸಹೃದಯ ಕನ್ನಡಿಗರೆಲ್ಲರೂ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಕ್ಷಣಾ ವೇದಿಕೆ ಕೋರಿದೆ.

ಜಾಗೃತಿ ಸಮಾವೇಶದ ಕರೆಯೋಲೆಗಾಗಿ ಇಲ್ಲಿ ಕ್ಲಿಕ್‌ ಮಾಡಿ- http://www.karnatakarakshanavedike.org

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X