ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಮಠಕ್ಕೆಆಡಳಿತಾಧಿಕಾರಿ: ಬಲಿದಾನಕ್ಕೂ ಸಿದ್ಧ -ಪೇಜಾವರ ಶ್ರೀ

By Staff
|
Google Oneindia Kannada News

ಶ್ರೀಕೃಷ್ಣ ಮಠಕ್ಕೆಆಡಳಿತಾಧಿಕಾರಿ: ಬಲಿದಾನಕ್ಕೂ ಸಿದ್ಧ -ಪೇಜಾವರ ಶ್ರೀ
ಉಡುಪಿ ಪೂರ್ವ ಪರಂಪರೆ ಅಧ್ಯಯನಕ್ಕೆ ನಿಡುಮಾಮಿಡಿ ಶ್ರೀಗಳಿಂದ ಸರ್ಕಾರಕ್ಕೆ ಮನವಿ

ಬೆಂಗಳೂರು : ರಾಜ್ಯಸರಕಾರ ಒತ್ತಾಯಪೂರ್ವಕವಾಗಿ ಉಡುಪಿ ಶ್ರೀಕೃಷ್ಣಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದರೆ, ದೇಶವ್ಯಾಪಿ ಅಹಿಂಸಾತ್ಮಕ ಚಳವಳಿ ರೂಪಿಸಲಾಗುವುದು. ಅಲ್ಲದೇ ಬಲಿದಾನಕ್ಕೂ ಸಿದ್ಧರಿರುವುದಾಗಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥರು ಎಚ್ಚರಿಸಿದ್ದಾರೆ.

ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಜರಾಯಿ ಖಾತೆ ಸಚಿವ ಎಂ.ಪಿ.ಪ್ರಕಾಶ್‌ ಹೇಳಿಕೆಗಳ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯೆ ಮತ್ತು ಮುಜರಾಯಿ ಇಲಾಖೆ ಕಾಯಿದೆಯನ್ನು ಬದಿಗಿಟ್ಟಿದೆ ಎಂದು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

1954ರ ಸುಪ್ರಿಂಕೋರ್ಟ್‌ ತೀರ್ಮಾನದ ಪ್ರಕಾರ ಮಠಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಸರಕಾರಕ್ಕೆ ಅವಕಾಶವಿಲ್ಲ. ಅಲ್ಲದೇ ಸುಪ್ರಿಂಕೋರ್ಟ್‌ ಪ್ರಕಾರ ಕೃಷ್ಣ ಮಠ ದೇವಸ್ಥಾನವೂ ಹೌದು. ಜೊತೆಗೆ ಮಠವೂ ಹೌದು. ಹೀಗಾಗಿ ಮುಜರಾಯಿ ಕಾನೂನಿನಿಂದ ಪೂರ್ಣ ವಿನಾಯಿತಿ ಸಿಗುತ್ತದೆ ಎಂದರು.

ಕನಕ ಗೋಪುರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಶಿಥಿಲಗೊಂಡಿದ್ದ ಗೋಪುರದ ಜಾಗದಲ್ಲಿ ನೂತನ ಗೋಪುರವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅದನ್ನು ಕೆಡವಲಾಗಿದೆ. ಇದನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನಗಳು ನಡೆದಿವೆ ಎಂದು ಅಭಿಪ್ರಾಯಪಟ್ಟರು.

ಹೊಸ ವಿವಾದ : ಉಡುಪಿಗೆ ಸಂಬಂಧಿಸಿದಂತೆ ಹೊಸ ವಿವಾದಕ್ಕೆ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನಾಂದಿ ಹಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಪೂರ್ವ ಪರಂಪರೆಗೆ ಸಂಬಂಧಿಸಿದಂತೆ ಹೊರಬರಬೇಕಾದ ಸತ್ಯಗಳು ಬಹಳಷ್ಟಿವೆ. ಪೂರ್ವ ಪರಂಪರೆಯ ಮೂಲ ಶೈವ ಸಂಸ್ಕೃತಿಯಾಗಿತ್ತು. ವೈಷ್ಣವ ಸಂಸ್ಕೃತಿಯ ಆಗಮನದಿಂದ ಶೈವ ಸಂಸ್ಕೃತಿ ಬದಿಗೆ ಸರಿದು ಕ್ಷೀಣಿಸಿದೆ ಎಂದಿದ್ದಾರೆ.

ಇಲ್ಲಿನ ಚಂದ್ರಮೌಳೀಶ್ವರ, ಅನಂತೇಶ್ವರ ದೇವಾಲಯಗಳು ಪ್ರಸ್ತುತ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹೆಚ್ಚಿನ ಅಧ್ಯಯನಕ್ಕೆ ಪರಿಣಿತರ ಆಯೋಗ ರಚಿಸಿ, ಆ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿಯುವಂತೆ ಚನ್ನಮಲ್ಲ ಸ್ವಾಮೀಜಿ, ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X