• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನ ಮಂಡಲದಿ ಮಾತಿನ ಚಕಮಕಿ ;ಬೆನ್ನಿ ಬಂಧನಕ್ಕೆ ಬಿಜೆಪಿ ಪಟ್ಟು

By Super
|

ಬೆಂಗಳೂರು : ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಎರಡು ಅಧಿವೇಶನಗಳಲ್ಲೂ ಸೋಮವಾರ(ಜ.24) ಬೆನ್ನಿ ಹಿನ್‌ ವಿಚಾರ ಪ್ರಮುಖವಾಗಿ ಚರ್ಚೆಗೆ ಗುರಿಯಾಯಿತು.

ವಿಧಾನ ಪರಿಷತ್‌ನಲ್ಲಿ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತನಾಡಿ, ಬೆನ್ನಿಹಿನ್‌ ಒಬ್ಬ ಪಾದ್ರಿ. ಆತ ಯಾರಿಗೂ ಯಾವ ಧರ್ಮಕ್ಕೂ ಅಡ್ಡಿ ಪಡಿಸಿಲ್ಲ. ಶಾಂತಿಯುತವಾಗಿ ಪ್ರಾರ್ಥನಾ ಸಭೆ ನಡೆದಿದೆ. ಆದರೆ ಈ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರತಿಪಕ್ಷಗಳು ಪ್ರಯತ್ನಿಸಿವೆ ಎಂದರು.

ಜಕ್ಕೂರು ವಿಮಾನ ನಿಲ್ದಾಣದ ಪ್ರದೇಶ ಕೇವಲ ಒಂದು ಮೈದಾನ. ಪ್ರತಿಪಕ್ಷಗಳು ಹೇಳುವಂತೆ ಇದು ಕಾಯ್ದಿಟ್ಟ ಪ್ರದೇಶವಲ್ಲ. ಅಗತ್ಯ ಸಂದರ್ಭಗಳಲ್ಲಿ ಮೈದಾನ ಬಳಸಿಕೊಂಡರೆ ತಪ್ಪಲ್ಲ ಎಂದು ಖರ್ಗೆ ಹೇಳಿದ್ದು, ವಿಧಾನ ಪರಿಷತ್‌ನಲ್ಲಿನ ಪ್ರತಿಪಕ್ಷದ ನಾಯಕ ಡಿ.ಹೆಚ್‌. ಶಂಕರಮೂರ್ತಿ ಅವರನ್ನು ಕೆರಳಿಸಿತು. ಶಂಕರಮೂರ್ತಿ ಅವರು ಬೆನ್ನಿಹಿನ್‌ನನ್ನು ವಂಚಕ ಎಂದು ಕರೆದದ್ದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಬೆನ್ನಿಹಿನ್‌ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿ ವಿಧಾನ ಪರಿಷತ್ತು ಸದಸ್ಯರು ಸಭಾತ್ಯಾಗ ಮಾಡಿದರು.

ವಿಧಾನ ಸಭೆ : ವಿಧಾನ ಸಭೆಯಲ್ಲಿಯಲ್ಲಿ ಅಧಿವೇಶನ ಆರಂಭವಾದ ತಕ್ಷಣ, ಬೆನ್ನಿಹಿನ್‌ ವಿಚಾರ ಪ್ರಸ್ತಾಪಿಸಿದ ಬಿ.ಎಸ್‌.ಯಡಿಯೂರಪ್ಪ, ಆತನನ್ನು ಬಂಧಿಸಬೇಕು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು. ಆಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಕಂಡು ಬಂತು.

ಪ್ರತಿಪಕ್ಷಗಳ ನಡವಳಿಕೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸ್ಪೀಕರ್‌ ಕೃಷ್ಣ, ಮತ್ತೆ ಇದೇ ವರ್ತನೆಗಳು ಮುಂದುವರೆದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಶ್ರದ್ಧಾಂಜಲಿ : ಅಧಿವೇಶನದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌, ಸಂಗೀತ ವಿದುಷಿ ಎಂ.ಎಸ್‌.ಸುಬ್ಬಲಕ್ಷ್ಮಿ, ವಿಜ್ಞಾನಿ ರಾಜ ರಾಮಣ್ಣ, ನಿಟ್ಟೂರು ಶ್ರೀನಿವಾಸರಾವ್‌, ಡಿ.ಎ.ಚಿನ್ನಪ್ಪ, ಸಾಗರನಹಳ್ಳಿ ರೇವಣ್ಣ, ಆರ್‌.ಡಿ.ಕಿತ್ತೂರು, ಅನ್ನಪೂರ್ಣಮ್ಮ, ಎಸ್‌.ಆರ್‌.ಲಕ್ಷ್ಮಯ್ಯ, ಎ.ಎ.ದೇಸಾಯಿ, ಆರ್‌.ಕೆಂಚಪ್ಪ, ಶಂಕರ್‌ ಮೊಕಾಶಿ ಪುಣೇಕರ್‌, ಸುನಾಮಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP demanded in the Karnataka Legislative Assembly the arrest of controversial American pastor Benny Hinn.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more