ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನ್ನಿ ದಂಪತಿ ಪ್ರಾರ್ಥನೆಯಾಂದಿಗೆ ‘ಆಶೀರ್ವಾದ ಉತ್ಸವ’ಕ್ಕೆ ಶುಭಂ

By Staff
|
Google Oneindia Kannada News

ಬೆನ್ನಿ ದಂಪತಿ ಪ್ರಾರ್ಥನೆಯಾಂದಿಗೆ ‘ಆಶೀರ್ವಾದ ಉತ್ಸವ’ಕ್ಕೆ ಶುಭಂ
ಭಾರತೀಯ ಮಹಿಳೆಯರಿಗಾಗಿ ಬೆನ್ನಿ ವಿಶೇಷ ಪ್ರಾರ್ಥನೆ

ಬೆಂಗಳೂರು : ದೇವ ಮಾನವರ ಸಾಲಿಗೆ ಅಮೆರಿಕಾದ ಕೊಡುಗೆಯಾದ ಬೆನ್ನಿ ಹಿನ್‌ ಭಾರತದ ನಾಯಕರು ಹಾಗೂ ಭಾರತೀಯ ಹೆಣ್ಣುಮಕ್ಕಳ ಹಿತಕ್ಕಾಗಿ ಪ್ರಾರ್ಥಿಸುವುದರೊಂದಿಗೆ ಮೂರು ದಿನಗಳ ಆಶೀರ್ವಾದ ಮಹೋತ್ಸವ ಭಾನುವಾರ ಕೊನೆಗೊಂಡಿತು.

ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಆಶೀರ್ವಾದ ಮಹೋತ್ಸವದ ಅಂತಿಮ ದಿನವಾದ ಭಾನುವಾರ (ಜ.23) ಕಳೆದೆರಡು ದಿನಗಳಿಗಿಂತಲೂ ಹೆಚ್ಚು ಜನ ಸೇರಿದ್ದರು. ಭಾನುವಾರ ರಜೆಯಾದುದರಿಂದ ರಾಜ್ಯ ಹಾಗೂ ಹೊರರಾಜ್ಯಗಳ ಸಹಸ್ರಾರು ಮಂದಿ ಬೆನ್ನಿ ದರ್ಶನಕ್ಕಾಗಿ ಆಗಮಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಬೆನ್ನಿ ಪತ್ನಿ ಸೂಸನ್‌ ಕೂಡ ಭಾಗವಹಿಸಿದ್ದುದು ವಿಶೇಷ. ಭಾರತೀಯ ಮಹಿಳೆಯರಿಗಾಗಿ ಬೆನ್ನಿ ಹಾಗೂ ಸೂಸನ್‌ ದಂಪತಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶವನ್ನು ಯೋಗ್ಯ ರೀತಿಯಲ್ಲಿ ನಡೆಸಲು ಮಹಿಳೆಯರು ಸಮರ್ಥರಾಗಿದ್ದಾರೆ. ಆದುದರಿಂದ ಅವರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ಹೇಳಿದ ಬೆನ್ನಿ - ನೆರೆದಿದ್ದ ಜನಸ್ತೋಮವನ್ನು ಆಕಾಶದತ್ತ ಕೈ ಎತ್ತಿ ದೇವರನ್ನು ದೇಶದ ಹಿತಕ್ಕೆ ಬೇಡುವಂತೆ ಹೇಳಿದರು. ಬೆನ್ನಿಯ ಸೂಚನೆಯ ಪ್ರಕಾರ ಅನೇಕರು ಭಾರತೀಯ ಧ್ವಜವನ್ನು ಹಿಡಿದು ಸಮಾರಂಭಕ್ಕೆ ಬಂದಿದ್ದರು.

ಸಮಾರೋಪ ಸಮಾರಂಭದಲ್ಲಿ ಹೋಪ್‌ ಎನ್ನುವ ಸಿ.ಡಿ. ಬಿಡುಗಡೆಯಾಯಿತು. ಈ ಸಿ.ಡಿ.ಯನ್ನು ಕೊಳ್ಳುವಂತೆ ಜನರನ್ನು ಒತ್ತಾಯಿಸಿದ ಬೆನ್ನಿ - ಸಿ.ಡಿ. ಮಾರಾಟದಿಂದ ಬರುವ ಹಣವನ್ನು ಸುನಾಮಿ ಸಂತ್ರಸ್ತರಿಗೆ ನೀಡುವುದಾಗಿ ಹೇಳಿದರು.

ಅನೇಕ ರಾಜ್ಯಗಳ ಸಚಿವರು, ಸಚಿವರ ಪತ್ನಿಯರು, ಅಧಿಕಾರಿಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X