ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಕಥೆ-ಲೇಖನ ಸ್ಪರ್ಧೆ

By Staff
|
Google Oneindia Kannada News

ವಿದ್ಯಾರ್ಥಿಗಳಿಗೆ ಕಥೆ-ಲೇಖನ ಸ್ಪರ್ಧೆ
ಮೈಸೂರಿನ ಎನ್‌.ಐ.ಇ ವತಿಯಿಂದ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ

ಮೈಸೂರಿನ ಪ್ರತಿಷ್ಠಿತ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ (ಎನ್‌.ಐ.ಇ.) ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಸಂಚಿಕೆ ‘ಮೈಸೂರು ಇಂಜಿನಿಯರ್‌’ನ ವತಿಯಿಂದ ಪಿ.ಯು., ಸ್ನಾತಕ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಮೂರನೇ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ಕನ್ನಡ ಸಣ್ಣ ಕಥಾ ಸ್ಪರ್ಧೆ ಹಾಗೂ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದ್ದು , ಸ್ಪಧೆಯ ನಿಯಮಾವಳಿಗಳು ಕೆಳಗಿನಂತಿವೆ.

ಕನ್ನಡ ಸಣ್ಣ ಕಥಾ ಸ್ಪರ್ಧೆಗೆ ನಿಯಮಗಳು :

  • ಕಥೆಗಳು ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು.
  • ಕಥೆಗಳು ಹಸ್ತ ಪ್ರತಿಯಲ್ಲಿ ಆರು ಪುಟಗಳನ್ನು ಮೀರಬಾರದು.
  • ಕಥಾ ಸ್ಪರ್ಧೆಗೆ ಬಹುಮಾನಗಳು ಇಂತಿವೆ: ಪ್ರಥಮ : ರೂ. 1,500/-, ದ್ವಿತೀಯ : ರೂ. 800/- ತೃತೀಯ : ರೂ. 500/- ಮತ್ತು ಸಮಾಧಾನಕರ (ಒಟ್ಟು) ರೂ. 500/-
ಕನ್ನಡ ವಿಜ್ಞಾನ ಲೇಖನ ಸ್ಪರ್ಧೆಗೆ ನಿಯಮಗಳು:
  • ವಿಜ್ಞಾನ ಅಥವಾ ತಂತ್ರಜ್ಞಾನ ಲೇಖನಗಳು ಯಾವುದೇ ವಿಷಯವನ್ನು ಕುರಿತದ್ದಾಗಿರಬಹುದು. ಆದರೆ, ತಜ್ಞೇತರರಿಗೆ ಸಾಮಾನ್ಯವಾಗಿ ತಿಳಿದಿರದ ವಿಷಯವಾಗಿರಬೇಕು. ಅಂದರೆ, ತೀರಾ ಸಾಮಾನ್ಯವಾದ ವಿಷಯಗಳಿಗೆ ಉತ್ತೇಜನ ದೊರಕದು.
  • ಲೇಖನದ ಮಟ್ಟವು ಕಾಲೇಜು ವಿಜ್ಞಾನ / ತಂತ್ರಜ್ಞಾನ ವಿದ್ಯಾರ್ಥಿಗಳನ್ನು ತಲುಪುವ ದೃಷ್ಟಿಯದ್ದಾಗಿರಬೇಕು. ಪೂರಕವಾದ ಅಂಕಿ ಅಂಶಗಳು, ಚಿತ್ರಗಳು, ಲೇಖನದ ಬೆಂಬಲಕ್ಕಿರಬೇಕು. ಉಲ್ಲೇಖಗಳ ಮತ್ತು ಪೂರಕ ಗ್ರಂಥಗಳ ಬಗ್ಗೆ ಮಾಹಿತಿ ಇರಬೇಕು.
  • ಲೇಖನಗಳು ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು. ಭಾಷಾಂತರವಾಗಿರಬಾರದು. ಆಹ್ವಾನಿಸಲ್ಪಟ್ಟಲ್ಲಿ ಲೇಖಕನು ತನ್ನ ಲೇಖನವನ್ನು ಖುದ್ದಾಗಿ ಮಂಡಿಸಲು ಸಿದ್ಧವಿರಬೇಕು.
  • ಲೇಖನಗಳು ಎಂಟು ಪುಟಗಳನ್ನು (ಪೂರಕ ಚಿತ್ರಗಳನ್ನು ಹೊರತುಪಡಿಸಿ) ಮೀರಬಾರದು.
  • ಹೊಸ ಪ್ರಯತ್ನಗಳಿಗೆ, ಜನಪ್ರಿಯ ಶೈಲಿಗೆ ಪ್ರಾಧಾನ್ಯತೆ ಇರುವುದು.
  • ವಿಜ್ಞಾನ ಲೇಖನ ಸ್ಪರ್ಧೆಯ ಬಹುಮಾನಗಳ ಒಟ್ಟು ಮೊತ್ತ ರೂ. 5000/-. ತೀರ್ಪುಗಾರರ ತೀರ್ಪಿನನ್ವಯ ವಿಜೇತರಿಗೆ ಪ್ರಶಸ್ತಿ ಮೊತ್ತವನ್ನು ಹಂಚಲಾಗುವುದು.
ವಿದ್ಯಾರ್ಥಿಗಳು ತಮ್ಮ ಕಥೆ / ಲೇಖನಗಳನ್ನು ಬರುವ ಫೆಬ್ರವರಿ 20 ರ ಒಳಗಾಗಿ ಕಾಲೇಜು ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ.

ಯದುಪತಿ ಪುಟ್ಟಿ,
ಪ್ರಾಧ್ಯಾಪಕರು, ಸಿವಿಲ್‌ ಇಂಜಿನಿಯರಿಂಗ್‌ ವಿಭಾಗ,
ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌,
ಮಾನಂದವಾಡಿ ರಸ್ತೆ,
ಮೈಸೂರು - 570 008.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X