ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಹಂತಕ ವೀರಪ್ಪನ್‌ ವಿಗ್ರಹ ಪ್ರತ್ಯಕ್ಷ ; ಸಮಾಧಿಯ ಬಳಿ ಜನಜಾತ್ರೆ!

By Staff
|
Google Oneindia Kannada News

ನರಹಂತಕ ವೀರಪ್ಪನ್‌ ವಿಗ್ರಹ ಪ್ರತ್ಯಕ್ಷ ; ಸಮಾಧಿಯ ಬಳಿ ಜನಜಾತ್ರೆ!
ವೀರಪ್ಪನ್‌ ಅಭಿಮಾನಿಯ ಅನ್ವೇಷಣೆಯಲ್ಲಿ ತಮಿಳುನಾಡು ಪೋಲೀಸರು

ಕೊಯಮತ್ತೂರು : ದಂತಚೋರ ವೀರಪ್ಪನ್‌ ಸಮಾಧಿ ಬಳಿ ದಿಢೀರೆಂಬಂತೆ ಆತನ ವಿಗ್ರಹ ಭಾನುವಾರ(ಜ.16)ಎದ್ದು ನಿಂತಿದ್ದು, ನೂರಾರು ಜನ ಕುತೂಹಲದಿಂದ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ಮೂಲಕ್ಕಾಡು ಪ್ರದೇಶದಲ್ಲಿನ ವೀರಪ್ಪನ್‌ ಸಮಾಧಿ ಬಳಿ ಎದ್ದುನಿಂತಿರುವ ಸುಮಾರು ಮೂರು ಅಡಿ ಎತ್ತರದ ಮಣ್ಣಿನ ಬೊಂಬೆ ಎಲ್ಲರ ಗಮನ ಸೆಳೆದಿದೆ. ವೀರಪ್ಪನ್‌ ಸದಾ ತೊಡುತ್ತಿದ್ದ ಹಸಿರು ಸಮವಸ್ತ್ರ, ಪೊದೆ ಮೀಸೆ, ಹೆಗಲ ಮೇಲೆ ಬಂದೂಕು ಹಿಡಿದು ನಿಂತ ವಿಗ್ರಹವನ್ನು,ಇಲ್ಲಿಗೆ ಯಾರು ತಂದು ನಿಲ್ಲಿಸಿದರು ಎನ್ನುವುದು ಗೊತ್ತಾಗಿಲ್ಲ . ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಗ್ರಹದ ಮೇಲೆ ನನ್‌ಮೈಯಿ ಸಾಯಿ(ಒಳ್ಳೆಯದನ್ನೇ ಮಾಡು) ಎಂದು ಬರೆಯಲಾಗಿದೆ. 2004ರ ಅಕ್ಟೋಬರ್‌18ರಂದು ಧರ್ಮಪುರಿಯಲ್ಲಿ ಪೋಲೀಸರ ಗುಂಡಿಗೆ ವೀರಪ್ಪನ್‌ ಸಾವನ್ನಪ್ಪಿದ್ದ . ಆತ, ಸಾವಿರಾರು ಆನೆಗಳನ್ನು ಕೊಂದು, ಕಾಡಿನ ಗಂಧದ ಮರಗಳನ್ನು ಬರಿದು ಮಾಡಿದ್ದ. ಅಲ್ಲದೇ ವೀರಪ್ಪನ್‌ ಗುಂಡಿಗೆ ನೂರಾರು ಪೋಲೀಸರು ಬಲಿಯಾಗಿದ್ದರು. ಆದರೆ ವೀರಪ್ಪನ್‌ ರಾಬಿನ್‌ಹುಡ್‌ನಂತೆ, ಆ ಭಾಗದ ಜನರ ಪ್ರೀತಿ ವಿಶ್ವಾಸವನ್ನು ಸಂಪಾದಿಸಿದ್ದ ಎನ್ನುವದು ಹಾಗೂ ವೀರಪ್ಪನ್‌ಗೆ ಅಭಿಮಾನಿಗಳಿದ್ದಾರೆ ಎನ್ನುವ ಅಂಶ ಈ ಪ್ರಕರಣದಿಂದ ಖಚಿತವಾಗಿದೆ.

ತಮಿಳು ಸಂಸ್ಕೃತಿ: ವ್ಯಕ್ತಿ ಆರಾಧನೆಗೆ ಹೆಸರುವಾಸಿಯಾಗಿರುವ ತಮಿಳುನಾಡಿನಲ್ಲಿ , ವಿಗ್ರಹ ಸ್ಥಾಪನೆ, ಗುಡಿ ನಿರ್ಮಾಣ ಇವೆಲ್ಲ ಸಾಮಾನ್ಯ ಸಂಗತಿಗಳು. ಮುಖ್ಯಮಂತ್ರಿ ಜಯಲಲಿತಾ, ನಟಿ ಖುಷ್ಟು, ರಜನಿಕಾಂತ್‌ ಮತ್ತಿತರರ ಗುಡಿ ಕಟ್ಟಿದ್ದ ತಮಿಳರು, ಈಗ ನರಹಂತಕನ ವಿಗ್ರಹ ಸ್ಥಾಪಿಸಿದ್ದಾನೆ. ನಾಳೆ ಗುಡಿ ನಿರ್ಮಾಣವಾದರೆ ಅಚ್ಚರಿ ಇಲ್ಲ.

(ಏಜನ್ಸೀಸ್‌)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X